ಕವಲೂರು ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಭೂಮಿಪೂಜೆ ನೆರವೇರಿಸಿದರು. ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಗೂಳಪ್ಪ ಹಲಗೇರಿ, ಬಾಲಚಂದ್ರ ಇತರರಿದ್ದರು. 
ಕೊಪ್ಪಳ

ಚೆಕ್ ಡ್ಯಾಂ ನಿರ್ಮಾಣದಿಂದ ರೈತರಿಗೆ ಅನುಕೂಲ

ಕವಲೂರು: ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ, ನೀರಾವರಿ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಸೇರಿ ಸಮಗ್ರ ಪ್ರಗತಿಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

 ಗ್ರಾಮದಲ್ಲಿ ಪಿಡಬ್ಲುೃಡಿ, ಕೆಆರ್‌ಐಡಿಎಲ್ ಹಾಗೂ ಇತರ ಯೋಜನೆಯಡಿ 19.60 ಕೋಟಿ ರೂ. ವೆಚ್ಚದ  ರಸ್ತೆ, ಸೇತುವೆ, ಚೆಕ್ ಡ್ಯಾಂ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. 
ರೈತರಿಗೆ ಬಲ ತುಂಬುವ ಸಲುವಾಗಿ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ 552 ಕೋಟಿ ರೂ. ಕಾಮಗಾರಿ ಟೆಂಡರ್ ಹಂತದಲ್ಲಿದೆ. ಅಳವಂಡಿ-ಬೆಟಗೇರಿ ಹಾಗೂ ನವಲಕಲ್ ಏತ  ನೀರಾವರಿ ಯೋಜನೆಗಳು ಶೀಘ್ರ ಜಾರಿಯಾಗಲಿವೆ. ಮುನಿರಾಬಾದ್‌ನಲ್ಲಿ ಕ್ಯಾನ್ಸರ್ ಕೇರ್ ಸೆಂಟರ್ ಆರಂಭಿಸಲಾಗುವದು. 
ಗ್ರಾಮೀಣ ಭಾಗದ ಸಮಸ್ಯೆಗಳ ನಿವಾರಣೆಗೆ ಹಂತ ಹಂತವಾಗಿ ಕ್ರಮ ಕೈಕೊಳ್ಳಲಾಗುವುದು. ಕವಲೂರಿನಲ್ಲಿ ಮೂರು ಚೆಕ್ ಡ್ಯಾಂ ನಿರ್ಮಾಣದಿಂದ 500 ರಿಂದ 600 ಎಕರೆ ಭೂಮಿ ನೀರಾವರಿ ಪ್ರದೇಶ ವಾಗಲಿದ್ದು, ರೈತರಿಗೆ ಅನುಕೂಲವಾಗಲಿದೆ ಎಂದರು.
ಪ್ರಮುಖ ಭರಮಪ್ಪ ನಗರ, ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಾಲಚಂದ್ರ, ಪ್ರಮುಖರಾದ ಅನ್ವರ್, ಅಕ್ಬರ್, ಸುರೇಶ ದಾಸರಡ್ಡಿ, ನಿಂಗಪ್ಪ, ತೋಟಪ್ಪ, ಅರವಿಂದಪ್ಪ, ಗೂಳಪ್ಪ, ದೇವಪ್ಪ, ಶಾಹೀದ್, ಹೊನ್ನಪ್ಪಗೌಡ, ತಾಪಂ ಇಒ ದುಂಡೇಶ ತುರಾದಿ, ಪಿಡಬ್ಲುೃಡಿ ಎಇಇ ವೆಂಕಟೇಶ, ಪಿಡಿಒ ಅನಿತಾ, ಎಡಿಎ ಜೀವನಸಾಬ್, ಪಿಎಸ್‌ಐ ಪ್ರಹ್ಲಾದ್ ನಾಯಕ ಇತರರಿದ್ದರು.