ಆನೆಗೊಂದಿಯ ನವವೃಂದಾನವ ಗಡ್ಡಿಯಲ್ಲಿ ಆರ್ಯವೈಶ್ಯ ಸಮಾಜದ ಪಾದಯಾತ್ರೆ ತಂಡದಿಂದ ನಿರಂತರ ಭಜನಾ ಸೇವೆ ಗುರುವಾರ ಜರುಗಿತು. 
ಕೊಪ್ಪಳ

ಲೋಕಕಲ್ಯಾಣಾರ್ಥ ಗಡ್ಡಿಯಲ್ಲಿ ವಿಶೇಷ ಪೂಜೆ

ಕುರುವತ್ತಿ ಶ್ರೀಕಾಂತಪ್ಪ
ಗಂಗಾವತಿ: ತಾಲೂಕಿನ ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ನವವೃಂದಾನವ ಗಡ್ಡಿಯಲ್ಲಿ ಆರ್ಯವೈಶ್ಯ ಸಮಾಜದ ಪಾದಯಾತ್ರೆ ತಂಡ ವಿರುಪಾಪುರ ಘಟಕದಿಂದ ವಿಶೇಷ ಪೂಜೆ ಮತ್ತು ನಿರಂತರ ಭಜನೆ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ನಗರದ ಹಿರೇಜಂತಕಲ್ ವಿರುಪಾಪುರದ ಆರ್ಯವೈಶ್ಯ ಸಮಾಜದವರು ಗ್ರಾಮದ ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆ ಮೂಲಕ ನವವೃಂದಾನವಗಡ್ಡಿಗೆ ತೆರಳಿದರು. ಗಡ್ಡಿಯಲ್ಲಿರುವ ಎಲ್ಲ ಯತಿವರ್ಯರ ವೃಂದಾವನಗಳಿಗೆ ವಿಶೇಷ ಪೂಜೆ, ಮಹಾಮಂಗಳಾರತಿ, ನವ ಬೃಂದಾವನ ಭಜನಾ ಮಂಡಳಿಯಿಂದ ನಿರಂತರ ಭಜನೆ ಮತ್ತು ಪ್ರಸಾದ ವಿತರಣೆ ಜರುಗಿತು.
ಸಮಾಜದ ಅಧ್ಯಕ್ಷ ದರೋಜಿ ನಾಗರಾಜ ಶ್ರೇಷ್ಠಿ ಮಾತನಾಡಿ, ಐದನೇ ವರ್ಷದ ಪಾದಯಾತ್ರೆಯಾಗಿದ್ದು, ಲೋಕಕಲ್ಯಾಣಾರ್ಥವಾಗಿ ನವವೃಂದಾವನಗಡ್ಡಿಯಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಗಿದೆ ಎಂದರು.
ಭಜನಾ ಮಂಡಳಿ ಅಧ್ಯಕ್ಷ ದರೋಜಿ ನರಸಿಂಹ ಶ್ರೇಷ್ಠಿ, ಮಹಿಳಾ ಮಂಡಳಿ ಅಧ್ಯಕ್ಷೆ ರುಕ್ಮಿಣಿ, ವಾಸವಿ ಯುವಜನ ಸಂಘದ ಅಧ್ಯಕ್ಷ ಮಂಜುನಾಥ, ಪ್ರಮುಖರಾದ ಭೀಮಭಟ್‌ಜೋಶಿ, ಸಂಜೀವ ಕುಮಾರ ರಾಯಚೂರು, ಬೆನ್ನೂರ ಪ್ರಹ್ಲಾದ, ದರೋಜಿ ವೆಂಕಟೇಶ, ದಮ್ಮೂರ್ ಸುರೇಶ, ಹಣವಾಳ ಚಂದ್ರಶೇಖರ, ಸತ್ಯನಾರಾಯಣ, ಗುಂಡೂರು ಪ್ರಹ್ಲಾದ ಇತರರಿದ್ದರು.