ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ನಾಯಕರಾದ ಜ್ಯೋತಿ ಗೊಂಡಬಾಳ, ಮಂಜುನಾಥ ಗೊಂಡಬಾಳ, ಅಕ್ಬರ್ ಪಾಷಾ ಪಲ್ಟನ್, ಸೋಮಶೇಖರ್ ಹಿಟ್ನಾಳ, ಮಲ್ಲಿಕಾರ್ಜುನ ಪೂಜಾರ, ಲಿಂಗರಾಜ ಕಲ್ಗುಡಿ, ಹನುಮೇಶ ಬೆಣ್ಣಿ, ಕುರುಗೋಡ ರವಿ ಇತರರಿದ್ದರು.
- ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ಕೊಪ್ಪಳ : ಎನ್ಟಿಎ ನೀಟ್ ಪರೀಕ್ಷೆ ನಿರ್ವಹಣೆಯಲ್ಲಿ ಎಡುವುತ್ತಿದ್ದು ಆಯಾ ರಾಜ್ಯಗಳಿಗೆ ಪರೀಕ್ಷೆ ನಡೆಸುವ ಅಧಿಕಾರ ನೀಡುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ನೀಟ್ ಪರೀಕ್ಷೆ ದೇಶದ ಲಾಂತರ ವಿದ್ಯಾರ್ಥಿಗಳ ಭವಿಷ್ಯ ಒಳಗೊಂಡಿದೆ. ಆದರೆ, ಪದೇ ಪದೆ ಹಗರಣ ನಡೆಯುತ್ತಿವೆ. ಕಳೆದ 10 ವರ್ಷದಲ್ಲಿ 70 ಬಾರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿವೆ. ಇದೊಂದು ಕಾರ್ಪೊರೇಟ್ ಪರೀಕ್ಷಾ ವ್ಯವಹಾರವಾಗಿ ಮಾರ್ಪಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅಕ್ರಮಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಸಂ ಪರಿವಾರ, ಆರ್ಎಸ್ಎಸ್ನವರೇ ಆರೋಪಿಗಳಾದ ಕಾರಣ ಕ್ರಮವಾಗುತ್ತಿಲ್ಲವೆಂದು ಆರೋಪಿಸಿದರು.
ಸುಪ್ರೀಂ ಕೋರ್ಟ್ ತಕ್ಷಣ ಮಧ್ಯ ಪ್ರವೇಶಿಸಬೇಕು. ನೀಟ್ ರದ್ದುಪಡಿಸಬೇಕು. ಮೊದಲಿನಂತೆ ಆಯಾ ರಾಜ್ಯಗಳಿಗೆ ಸೀಟಅಉ ಹಂಚಿಕೆಗೆ ಅವಕಾಶ ಒದಗಿಸಿಕೊಡಬೇಕು. ಉತ್ತರ ಭಾರತದವರಿಗೆ ಲಾಭ ಮಾಡುವ ಉದ್ದೇಶದಿಂದ ಪರೀಕ್ಷೆ ಹಾಳಾಗುತ್ತಿದೆ. ದಣ ರಾಜ್ಯ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಅದನ್ನು ಸರಿಪಡಿಸಬೇಕು. ಪರೀಕ್ಷಾ ವ್ಯವಸ್ಥೆ ನಿಭಾಯಿಸುವಲ್ಲಿ ವಿಲವಾಗಿರುವ ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ನಾಯಕರಾದ ಜ್ಯೋತಿ ಗೊಂಡಬಾಳ, ಮಂಜುನಾಥ ಗೊಂಡಬಾಳ, ಅಕ್ಬರ್ ಪಾಷಾ ಪಲ್ಟನ್, ಸೋಮಶೇಖರ್ ಹಿಟ್ನಾಳ, ಮಲ್ಲಿಕಾರ್ಜುನ ಪೂಜಾರ, ಲಿಂಗರಾಜ ಕಲ್ಗುಡಿ, ಹನುಮೇಶ ಬೆಣ್ಣಿ, ಕುರುಗೋಡ ರವಿ ಇತರರಿದ್ದರು.