- ಶಾಸಕ ರಾಯರಡ್ಡಿ ಹೇಳಿಕೆ
- ದಾವಣಗೆರೆ, ಬಾಗಲಕೋಟೆ ಉಪ ಚುನಾವಣೆ
ಕೊಪ್ಪಳ: ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದಾವಣಗೆರೆ ದಣ, ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ದಾವಣಗೆರೆಯಲ್ಲಿ ನಮ್ಮ ಪಕ್ಷದವರೇ ಸ್ಪರ್ಧೆ ಮಾಡಿದ್ದಾರೆ. ಬಂಡಾಯ ಅಭ್ಯರ್ಥಿಗಳಲ್ಲ. ನಾಮಪತ್ರ ವಾಪಸ್ ಪಡೆಯಬೇಕಿತ್ತು. ಆದರೆ, ತಪು$್ಪ ತಿಳಿವಳಿಕೆಯಿಂದ ವಾಪಸ್ ಪಡೆದಿಲ್ಲ. ಸಿಎಂ, ಕೆಪಿಸಿಸಿ ಅಧ್ಯಕ್ಷರು ಮಾತನಾಡಿ ಸರಿಪಡಿಸುತ್ತಾರೆ ಎಂದರು.
ಅಲ್ಪಸಂಖ್ಯಾತರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಆದರೆ, ಹೈಕಮಾಂಡ್ ರ್ನಿಣಯ ಮಾಡಿದ್ದನ್ನು ಒಪ್ಪಿಕೊಳ್ಳಬೇಕು. ಗೊಂದಲದಿಂದ ಲಿತಾಂಶದ ಮೇಲೆ ಯಾವ ಪರಿಣಾಮ ಆಗದು. ಸಚಿವ ಜಮೀರ್ಖಾನ್ ದಾವಣಗೆರೆಗೆ ಬರಲಿದ್ದಾರೆ. ಇಂದು ಯಾರೂ ಯಾರ ಮಾತು ಕೇಳುವುದಿಲ್ಲ. ಮನೆಯಲ್ಲಿಯೇ ಗಂಡನ ಮಾತು ಹೆಂಡತಿ ಕೇಳುವುದಿಲ್ಲ. ಜನರು ತಮಗೆ ಅನಿಸಿದ್ದನ್ನು ಮಾಡುತ್ತಾರೆಂದರು.