ಚಿಕ್ಕವಂಕಲಕುಂಟಾದಲ್ಲಿ ಆಯೋಜಿಸಿದ್ದ ಗ್ರಾಮೀಣ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಮುಖಂಡರಾದ ರಾಘವೇಂದ್ರ ಮಡಿವಾಳರ, ನಾಗರಾಜ ಓನಜಹಳ್ಳಿ, ಅಮರೇಶ ಗೌಡ್ರ, ಶ್ರೀರಾಮ, ನಾಗರಾಜ ಶಾಸ್ತ್ರಿ ಇತರರಿದ್ದರು.
- ಚಿಕ್ಕವಂಕಲಕುಂಟಾ ಕ್ರಿಕೆಟ್ ಟೂರ್ನಮೆಂಟ್
- ಕಾಂಗ್ರೆಸ್ ಮುಖಂಡ ಬಸವರಾಜ ಹಿರೇಮನಿ ಅಭಿಮತ
ಯಲಬುರ್ಗಾ: ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ ಎಂದು ಕಾಂಗ್ರೆಸ್ ಯುವ ಮುಖಂಡ ಹಾಗೂ ಗುತ್ತಿಗೆದಾರ ಬಸವರಾಜ ಹಿರೇಮನಿ ಹೇಳಿದರು.
ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮೀಣ ಮಟ್ಟದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ವಿಜೇತ ತಂಡಗಳಿಗೆ ಶುಕ್ರವಾರ ಬಹುಮಾನ ವಿತರಿಸಿ ಮಾತಮಾಡಿದರು.
ಕ್ರೀಡೆಯು ಒತ್ತಡ ನಿವಾರಿಸಿ, ಆತ್ಮವಿಶ್ವಾಸ ಹೆಚ್ಚಳ, ಶಿಸ್ತು ಹಾಗೂ ನಾಯಕತ್ವ ಗುಣ ಬೆಳೆಸುತ್ತದೆ. ಸಾಮಾಜಿಕ ಸಾಮರಸ್ಯ ಮತ್ತು ಉತ್ತಮ ಮೌಲ್ಯಗಳನ್ನು ಕಲಿಯಲು ಸಹಾಯ ಮಾಡುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ವಿರೂಪಾಕ್ಷಿ ದೇವಲ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಆಯೋಜಿಸುವ ಕ್ರೀಡೆಗಳು ಯುವಕರಲ್ಲಿ ಸಾಮರಸ್ಯ ಉಂಟು ಮಾಡುತ್ತವೆ. ದೈನಂದಿನ ಜೀವನದಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ವಿತರಿಸಲಾಯಿತು. ಮುಖಂಡರಾದ ರಾಘವೇಂದ್ರ ಮಡಿವಾಳರ, ನಾಗರಾಜ ಓನಜಹಳ್ಳಿ, ಅಮರೇಶ ಗೌಡ್ರ, ಶ್ರೀರಾಮ, ನಾಗರಾಜ ಶಾಸ್ತ್ರಿ, ರಾಮಕುಮಾರ ಇತರರಿದ್ದರು.