ಹನುಮಂತಪ್ಪ ಕೌದಿ 
ಕೊಪ್ಪಳ

ಮಾಲಿನ್ಯಕಾರಕ ಕಾರ್ಖಾನೆಗಳನ್ನು ಖಂಡಿಸಿ

ರವೀಂದ್ರ ರಡ್ಡಿ

ಪ್ರಮುಖ ಮುಖ್ಯಾಂಶಗಳು

  • ಹನುಮಂತಪ್ಪ ಕೌದಿ ಕರೆ
  • ಕಾರ್ಖಾನೆ ಪರವಾಗಿ ಹೋರಾಟ
ಕೊಪ್ಪಳ: ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸದ್ಯ ಜನರಿಗೆ ಮಾಲಿನ್ಯ ಉಣಬಡಿಸುತ್ತಿರುವ ಕೈಗಾರಿಕೆಗಳ ವಿರುದ್ಧ ಪ್ರತಿಭಟಿಸುವ ಬದಲು, ಇನ್ನು ಆರಂಭವಾಗದೆ ಇರುವ ಬಿಎಸ್​ಪಿಎಲ್​ ಕಾರ್ಖಾನೆ ವಿರುದ್ಧ ಪ್ರತಿಭಟಿಸುತ್ತಿರುವುದು ಖಂಡನೀಯ. ನಾವು ಭೂಮಿ ಕಳೆದುಕೊಂಡಿದ್ದು ಸರ್ಕಾರ ಕೈಗಾರಿಕೆ ಆರಂಭಿಸಲು ಅನುಮತಿಸಬೇಕು. ಇಲ್ಲವೆ ನಮಗೆ ಸರ್ಕಾರಿ ನೌಕರಿ ಕೊಡಬೇಕೆಂದು ಭೂಮಿ ಕಳೆದುಕೊಂಡ ರೈತ ಹನುಮಂತಪ್ಪ ಕೌದಿ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಾವೂ ಭೂಮಿ ಕೊಡುವುದಿಲ್ಲವೆಂದು ಸರ್ಕಾರ ಬಲವಂತದಿಂದ ವಶಕ್ಕೆ ಪಡೆದಿದೆ. 20 ವರ್ಷವಾದರೂ ಕಂಪನಿ ಆರಂಭವಾಗಿಲ್ಲ. ನಮ್ಮ ಜಮೀನು ನಮಗೆ ಸಿಕ್ಕಿಲ್ಲ. ಈಗ ಕೈಗಾರಿಕೆ ಆರಂಭಿಸದಂತೆ ಕೆಲವರು ವಿರೋಧಿಸುತ್ತಿದ್ದಾರೆ. ಬಗನಾಳ, ಅಲ್ಲಾನಗರ, ಕುಣಿಕೇರಿ, ಹಾಲವರ್ತಿ ಭಾಗದಲ್ಲಿ ಐರನ್​, ಸ್ಪಾಂಜ್​ ಟಕಗಳಿಂದ ಮಾಲಿನ್ಯ ಆಗುತ್ತಿದೆ. ಅದಕ್ಕೆ ನಮ್ಮ ಖಂಡನೆ ಇದೆ. ಆದರೆ, ಹೋರಾಟಗಾರರು ಇನ್ನು ಆರಂಭವಾಗದ ಬಿಎಸ್​ಪಿಎಲ್​ ಟಕ ಖಂಡಿಸುವುದು ಸರಿಯಲ್ಲವೆಂದು ವಿರೋಧಿಸಿದರು.
ಕಾರ್ಖಾನೆ ಬೇಕೆಂದು ನಾವು 118ದಿನ ನಿತಂತರ ಧರಣಿ ನಡೆಸಿದ್ದೇವೆ. ಸರ್ಕಾರ, ಜನಪ್ರತಿನಿಧಿಗಳು ನಮ್ಮ ಮನವಿಗೆ ಸ್ಪಂದಿಸಿಲ್ಲ. ಮೊದಲು ನಾವು ಡಿಸಿ ಕಚೇರಿ ಬಳಿ ಹೋರಾಟಕ್ಕೆ ಪರವಾನಗಿ ಪಡೆದಿದ್ದೆವು. ತಹಸೀಲ್​ ಕಚೇರಿ ಬಳಿ ಅವಕಾಶ ನೀಡಿದ್ದಾರೆ. ಇನ್ನು ಮುಂದೆ ನಗರಸಭೆ ಮುಂಭಾಗದಲ್ಲಿ ಸ್ಥಳ ಕಲ್ಪಿಸುವಂತೆ ಕೋರಿ ಮನವಿ ಸಲ್ಲಿಸುತ್ತೇವೆ. ಇಲ್ಲಿಯೇ ಹೋರಾಟ ಮಾಡುತ್ತೇವೆಂದು ತಿಳಿಸಿದರು.
ರೈತರಾದ ಕಾಮಣ್ಣ ಕಂಬಳಿ, ಕೇಮಪ್ಪ ಇಟಗಿ, ನಾಗರಾಜ, ಗೋಣಿಬಸಪ್ಪ ಇದ್ದರು.