ಕನಕಗಿರಿಯಲ್ಲಿ ತಿಂಗಳ ಪರ್ಯಂತ ಗ್ರಾಮ ಪ್ರದಕ್ಷಿಣೆ ಕಾರ್ಯಕ್ರಮ ಪಲ್ಲಕ್ಕಿ ಉತ್ಸವದೊಂದಿಗೆ ಮುಕ್ತಾಯಗೊಂಡಿತು. ಭಜನಾ ಸಂಘದ ಅಧ್ಯಕ್ಷ ಗೋಪಾಲರೆಡ್ಡಿ, ಕಲಾವಿದರಾದ ಹನುಮಂತರೆಡ್ಡಿ, ಭೀಮರೆಡ್ಡಿ, ರಾಮಣ್ಣ ಗುಂಜಳ್ಳಿ ಇತರರಿದ್ದರು. 
ಕೊಪ್ಪಳ

ಪಲ್ಲಕ್ಕಿ ಉತ್ಸವದೊಂದಿಗೆ ತೆರೆ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ತಿಂಗಳ ಪರ್ಯಂತ ಗ್ರಾಮ ಪ್ರದಕ್ಷಿಣೆ
  • ಕನಕಗಿರಿ ಶ್ರಾವಣ ಮಾಸದ ಅಂಗವಾಗಿ ಭಜನಾ
ಕನಕಗಿರಿ: ಶ್ರಾವಣ ಮಾಸದ ಅಂಗವಾಗಿ ಪಟ್ಟಣದ ಶ್ರೀ ಕನಕಾಚಲಪತಿ ಭಜನಾ ಸಂಘದಿಂದ ಹಮ್ಮಿಕೊಂಡಿದ್ದ ತಿಂಗಳ ಪರ್ಯಂತದ ಗ್ರಾಮ ಪ್ರದಕ್ಷಿಣೆ ಭಜನೆಯು ಪಲ್ಲಕ್ಕಿ ಉತ್ಸವದೊಂದಿಗೆ ಸಂಪನ್ನಗೊಂಡಿತು.
ಸಂಘದ ಕಾರ್ಯದರ್ಶಿ ಗುಂಡಪ್ಪ ಚಿತ್ರಗಾರ ಮಾತನಾಡಿ, ಪಟ್ಟಣದ ಒಳತಿಗಾಗಿ ಕಳೆದ ಹಲವು ವರ್ಷಗಳಿಂದ ಶ್ರಾವಣ ಮಾಸದಲ್ಲಿ ತಿಂಗಳ ಕಾಲ ಭಜನೆ ಸಹಿತ ದೀಪಾರಾಧನೆ ನಡೆಸುತ್ತ ಬರಲಾಗಿದೆ. ಈ ಭಕ್ತಿಮಾರ್ಗದ ಕಾರ್ಯಕ್ರಮದಲ್ಲಿ ಯುವಕರು, ಹಿರಿಯರ ಜತೆಗೆ ಮಕ್ಕಳು ಪಾಲ್ಗೊಂಡು ಭಜನೆ ಮಾಡಿದ್ದಾರೆ. ಶ್ರಾವಣ ಮಾಸ ಮುಗಿದ ಬಳಿಕ ಪಾಢ್ಯ ದಿನವಾದ ಶನಿವಾರ ನಾನಾ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಪಲ್ಲಕ್ಕಿಯೊಂದಿಗೆ ಗ್ರಾಮ ಪ್ರದಕ್ಷಣೆಗೆ ಸಂಪನ್ನಗೊಂಡಿರುವುದಾಗಿ ತಿಳಿಸಿದರು. ಭಜನಾ ಸಂಘದ ಅಧ್ಯಕ್ಷ ಗೋಪಾಲರೆಡ್ಡಿ, ಕಲಾವಿದರಾದ ಹನುಮಂತರೆಡ್ಡಿ, ಭೀಮರೆಡ್ಡಿ, ರಾಮಣ್ಣ ಗುಂಜಳ್ಳಿ, ನಾಗರಾಜ ಚಿತ್ರಗಾರ, ಓಣಿಮನಿ ಶ್ರೀನಿವಾಸರೆಡ್ಡಿ, ಕರುಣಾಕರರೆಡ್ಡಿ, ಪರಂಧಾಮರೆಡ್ಡಿ, ಸುಬ್ಬಾರೆಡ್ಡಿ ರೌಡೂರು, ಶರಣಪ್ಪ ಕಾರಪುಡಿ ಇತರರಿದ್ದರು.