ಕೊಪ್ಪಳದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ನೆಡೆದ ಹಾಲುಮತ ಮಹಾಸಭಾದಿಂದ ನೆಡೆದ ಅಹಲ್ಯಾಬಾಯಿ ಹೋಳ್ಕರ್ ಜಯಂತ್ಯುತ್ಸವ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ಉದ್ಘಾಟಿಸಿದರು. ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿ, ದಾವಣಗೆರೆ ಐಎಎಸ್ ಇನ್ಸೈಟ್ ಕೋಚಿಂಗ್ ಸಂಸ್ಥೆ ಸಂಸ್ಥಾಪಕ ಜಿ.ಬಿ ವಿನಯ್ ಕುಮಾರ, ರುದ್ರಣ್ಣ ಗುಳಗುಳಿ, ಹನುಮಂತ ಕೌದಿ, ತಾಪಂ ಇಒ ದುಂಡಪ್ಪ ತುರಾದಿ ಇದ್ದರು.
- ಜಿ.ಬಿ ವಿನಯ್ ಕುಮಾರ
- ಪ್ರತಿಭಾ ಪುರಸ್ಕಾರ
ಕೊಪ್ಪಳ : ಅಲ್ಪತೃಪ್ತಿ, ಕಂಫರ್ಟ್ ಜೋನ್ ಎಂಬುದು ನಮ್ಮ ಜೀವನದ ಜಡತ್ವಕ್ಕೆ ಮತ್ತು ಹಿಂದುಳಿಯುವಿಕೆಗೆ ಕಾರಣವಾಗುತ್ತದೆ. ಹಾಗಾಗಿ ಮಕ್ಕಳು ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು ಎಂದು ದಾವಣಗೆರೆ ಐಎಎಸ್ ಇನ್ಸೈಟ್ ಕೋಚಿಂಗ್ ಸಂಸ್ಥೆ ಸಂಸ್ಥಾಪಕ ಜಿ.ಬಿ ವಿನಯ್ ಕುಮಾರ ಹೇಳಿದರು.
ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನೆಡೆದ ಅಹಲ್ಯಾಬಾಯಿ ಹೋಳ್ಕರ್ ಜಯಂತ್ಯುತ್ಸವ ಹಾಗೂ ಎಸ್.ಎಸ್.ಎಲ್.ಸಿ ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಸದಾ ದೊಡ್ಡ ಕನಸು ಕಾಣಬೇಕು ಮತ್ತು ಆ ಕನಸುಗಳನ್ನು ಬೆನ್ನತ್ತಿ ನನಸು ಮಾಡಲು ಪ್ರಯತ್ನಿಸಬೇಕು. ಸೋತಾಗ ನಿರಾಶೆಯಾಗದೆ ಪುನ: ಪ್ರಯತ್ನದಲ್ಲಿರಬೇಕು. ಒಂದಲ್ಲ ಒಂದು ದಿನ ಯಶಸ್ಸು ಖಂಡಿತ ದೊರೆಯುತ್ತದೆ. ಅದರೊಂದಿಗೆ ಉನ್ನತ ಮಟ್ಟದ ಹುದ್ದೆ ದೊರೆಯುತ್ತದೆ ಎಂದು ಹೇಳಿದರು.
ಸಮುದಾಯದ ಗುರುಗಳಾದ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಮಹಾಸಭಾದ ರಾಜ್ಯದ್ಯಕ್ಷ ರುದ್ರಣ್ಣ ಗುಳಗುಳಿ, ಜಿಲ್ಲಾಧ್ಯಕ್ಷ ಹನುಮಂತ ಕೌದಿ, ತಾಲೂಕಾಧ್ಯಕ್ಷ ಮುದ್ದಪ್ಪ ಬೇವಿನಹಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರ ಹೊರಪೇಟೆ, ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸವರ್ಗೊಳ್, ಕೊಪ್ಪಳ ನಗರಠಾಣೆ ಪಿಐ- ಸುರೇಶ ಡಿ., ತಾಪಂ ಇಒ ದುಂಡಪ್ಪ ತುರಾದಿ, ಪಿಎಸ್ಐ ರೇವಣಸಿದ್ಧಪ್ಪ, ಪ್ರಮುಖರಾದ ಶಿವಯ್ಯ, ರಮೇಶ ಇತರರಿದ್ದರು.
"
ಹಾಲುಮತ ಸಮುದಾಯದ ಮಕ್ಕಳಿಗೆ ನೀಡುತ್ತಿರುವುದು ಒಳ್ಳೆಯದು ಇದರಿಂದ ಮಕ್ಕಳಲ್ಲಿ ಓದಿನ ಬಗ್ಗೆ ಇನ್ನಷ್ಟು ಆಸಕ್ತ ಹೆಚ್ಚಲಿದೆ. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೊಸ ಸಂಪುಟ ಸಭೆಯಲ್ಲಿ ಸ್ಥಾನ ಸಿಕ್ಕು ಸಚಿವರಾಗಲಿ.
— ದೊಡ್ಡನಗೌಡ ಎಚ್. ಪಾಟೀಲ. ಶಾಸಕ ಕುಷ್ಟಗಿ.