ಸಿದ್ದಾಪುರದಲ್ಲಿ ರಾರಾವಿ ಶ್ರೀ ಗೋವಿಂದರಾಯ ದೇವಸ್ಥಾನದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಸಚಿವ ಶಿವರಾಜ ತಂಗಡಗಿ ಶಂಕುಸ್ಥಾಪನೆ ನೆರವೇರಿಸಿದರು. ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜಪ್ಪ, ಗ್ರಾಪಂ ಅಧ್ಯಕ್ಷೆ ಶಿವಗಂಗಾ, ಪ್ರಮುಖರಾದ ಜನಗಂಡೆಪ್ಪ ಪೂಜಾರ್, ಡಾ.ಕೆ.ಎಸ್.ಪಾಟೀಲ್, ಹನುಮೇಶ್, ರವಿಚಂದ್ರ ಹೊಸಮನಿ, ಬಸವರಾಜ ನೀರಗಂಟಿ ಇತರರಿದ್ದರು.
ಸಿದ್ದಾಪುರ: ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಇಲ್ಲಿನ ರಾರಾವಿ ಶ್ರೀ ಗೋವಿಂದರಾಯ ದೇವಸ್ಥಾನದ ಸಮುದಾಯ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಜನರಿಗೆ ಒಳಿತಾಗುವ ಯೋಜನೆಗಳನ್ನು ನೀಡಿದ್ದೇವೆ. ಸ್ತ್ರೀಶಕ್ತಿ, ಉಚಿತ ವಿದ್ಯುತ್, ಮಹಿಳೆಯರಿಗೆ ಮಾಸಿಕ 2 ಸಾವಿರ ಸೇರಿ ಇತರ ಯೋಜನೆಗಳು ಜನರಿಗೆ ಅನುಕೂಲವಾಗಿವೆ. ಸರ್ಕಾರದಿಂದ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. ರಾರವಿ ಶ್ರೀ ಗೋವಿಂದರಾಯ ಸಮುದಾಯ ಭವನಕ್ಕೆ 25 ಲಕ್ಷ ರೂ. ಮಂಜೂರು ಮಾಡಲಾಗಿದೆ. ಈಗಾಗಲೇ ಕ್ಷೇತ್ರ ವ್ಯಾಪ್ತಿಯಲ್ಲಿ ಆದ್ಯತೆ ಮೇರೆಗೆ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅಧಿಕಾರ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡಲಾಗುವುದು. ಸಾರ್ವಜನಿಕ ಸಹಕಾರ ಅಗತ್ಯ ಎಂದರು.
ಸಂಸದ ರಾಜಶೇಖರ ಹಿಟ್ನಾಳ, ಗ್ರಾಪಂ ಅಧ್ಯಕ್ಷೆ ಶಿವಗಂಗಾ, ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜಪ್ಪ, ಪ್ರಮುಖರಾದ ಜನಗಂಡೆಪ್ಪ ಪೂಜಾರ್, ಡಾ.ಕೆ.ಎಸ್.ಪಾಟೀಲ್, ಹನುಮೇಶ್, ರವಿಚಂದ್ರ ಹೊಸಮನಿ, ಬಸವರಾಜ ನೀರಗಂಟಿ, ನಾಗೇಶ್ ಸಿಂಧನೂರು, ಬೀರಪ್ಪ, ಮಲ್ಲಿಕಾರ್ಜುನ ಹೊಸಮನಿ, ವಿರೇಶ್, ನಾಗರಾಜ ಇತರರಿದ್ದರು.