ಶಹಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯನ್ನು ಪಿಡಿಒ ಗೀತಾಕುಮಾರಿ ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ಹುಲ್ಲೇಶ್ ಸಿಂದೋಗಿ, ಉಪಾಧ್ಯಕ್ಷೆ ರೇವತಿ ಗೋನಾಳ, ಗ್ರಾಪಂ ಸದಸ್ಯ ಮುರಳೀಧರ ಇತರರಿದ್ದರು.
ಮುನಿರಾಬಾದ್: ಬೇವಿನಹಳ್ಳಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲು ಮುಂದಿನ ಬಜೆಟ್‌ನಲ್ಲಿ ನೀಲಿನಕ್ಷೆ ತಯಾರಿಸಿ ಹಂತ-ಹಂತವಾಗಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಪಿಡಿಒ ಗೀತಾಕುಮಾರಿ ಹೇಳಿದರು.
ಸಮೀಪದ ಶಹಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದರು. ಬೇವಿನಹಳ್ಳಿ ಗ್ರಾಪಂ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳಿಗೆ ಮೈದಾನ, ಕಾಂಪೌಂಡ್, ವಿದ್ಯುತ್, ಕುಡಿವ ನೀರು, ಶೌಚಗೃಹ, ಕಂಪ್ಯೂಟರ್ ದುರಸ್ತಿ, ಕಟ್ಟಡಗಳಿಗೆ ಬಣ್ಣ ಹಚ್ಚುವುದು ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸಲು ಯೋಜನೆ ರೂಪಿಸಲಾಗುವುದು ಎಂದರು.
ಶಹಪುರ, ಲಿಂಗದಳ್ಳಿ, ಬೇವಿನಹಳ್ಳಿ ಗ್ರಾಮಗಳ ಶಾಲೆಗಳ ಕುಂದು ಕೊರತೆ ಆಲಿಸಿದ ಪಿಡಿಒ ಗೀತಾಕುಮಾರಿ, ಮಕ್ಕಳೊಂದಿಗೆ ಸಂವಹನ ನಡೆಸಿ ಅವರ ಆಸೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಎಸ್ಡಿಎಂಸಿ ಅಧ್ಯಕ್ಷ ಹುಲ್ಲೇಶ್ ಸಿಂದೋಗಿ, ಉಪಾಧ್ಯಕ್ಷೆ ರೇವತಿ ಗೋನಾಳ, ತಾಪಂ ಸಾಮಾಜಿಕ ಲೆಕ್ಕ ಪರಿಶೋಧನೆ ಸಂಯೋಜಕ ಈರಣ್ಣ ಸಾಲಮನಿ, ರೀಡ್ಸ್ ಸಂಸ್ಥೆಯ ಮಂಜುನಾಥ, ಜಿಲ್ಲಾ ಮಕ್ಕಳ ಘಟಕದ ರವಿ ಬಡಿಗೇರ, ಎಎನ್‌ಎಂ ಮಲ್ಲಮ್ಮ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕಿ ಲಕ್ಷ್ಮೀದೇವಿ ಚೌದರಿ, ಗ್ರಾಪಂ ಸದಸ್ಯ ಮುರಳೀಧರ, ಕಾರ್ಯದರ್ಶಿ ಶಿವಾನಂದ ಪಂಥರ್, ಮುಖ್ಯೋಪಾಧ್ಯಾಯ ದೇವರಾಜ ಎ.ಎಸ್., ಗ್ರಾಮಸ್ಥರು ಹಾಗೂ ಪಾಲಕರಿದ್ದರು