ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಚಟುವಟಿಕೆಗಳ ಆರಂಭದ ಕಾರ್ಯಕ್ರಮವನ್ನು ಕಂಪ್ಲಿ ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಡಾ.ಬಿ.ಶ್ರೀನಿವಾಸರೆಡ್ಡಿ ಗುರುವಾರ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಜಿ. ಶಿವರಾಜ ಗುರಿಕಾರ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜೆ.ಕಷ್ಣ ಇತರರಿದ್ದರು. 
ಕೊಪ್ಪಳ

ಯಶಸ್ಸಿಗೆ ಆರ್ಥಿಕ ಶಿಸ್ತು ಅವಶ್ಯ

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ಡಾ.ಬಿ. ಶ್ರೀನಿವಾಸರೆಡ್ಡಿ ಅಭಿಮತ
ಗಂಗಾವತಿ: ನಿರಂತರ ಅಧ್ಯಯನ ಮತ್ತು ಆರ್ಥಿಕ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ವಿ ನಾಯಕನಾಗಲು ಸಾಧ್ಯ ಎಂದು ಕಂಪ್ಲಿ ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಡಾ.ಬಿ. ಶ್ರೀನಿವಾಸರೆಡ್ಡಿ ಹೇಳಿದರು.
ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಸ್ನಾತಕೋತ್ತರ ಅರ್ಥಶಾಸ ವಿಭಾಗದಿಂದ ಗುರುವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಚಟುವಟಿಕೆಗಳ ಆರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅರ್ಥಶಾಸ್ತ್ರ ಸಿದ್ಧಾಂತದ ಅರಿವಿನೊಂದಿಗೆ ಪಾಲನೆ ಮಹತ್ವಾಗಿದೆ. ದೈನಂದಿನ ಬದುಕಿನಲ್ಲಿ ಸಿದ್ಧಾಂತಗಳನ್ನು ಅನುಸರಿಸಿ ಪ್ರಾಯೋಗಿಕ ಪ್ರಯೋಜನ ಪಡೆಯಬೇಕು. ಅರ್ಥಶಾಸ್ತ್ರದ ಉಪಯೋಗ ಎಂದಿಗಿಂತ ಈಗ ಪ್ರಸ್ತುತವಾಗಿದೆ. ಹಣದ ಬಳಕೆ, ಚಲನಶೀಲತೆ ಹೆಚ್ಚಾದಂತೆಲ್ಲ ಅರ್ಥಶಾಸ್ತ್ರದ ಮಹತ್ವದ ಅರಿವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ ಜಿ.ಶಿವರಾಜ ಗುರಿಕಾರ್ ಮಾತನಾಡಿ, ಅರ್ಥಶಾಸ ಅಧ್ಯಯನ ಬಹುಮುಖಿ ಆಯಾಮ ಪಡೆದಿದೆ. ವಿದ್ಯಾರ್ಥಿಗಳು ಅಂಕದ ಹಿನ್ನೆಲೆಯಲ್ಲಿ ಓದದೇ ಆಳವಾದ ತಿಳಿವಿನ ಅಧ್ಯಯನ ದಷ್ಟಿಯಿಂದ ಓದಬೇಕೆಂದರು.
ಪ್ರಾಧ್ಯಾಪಕ ಡಾ.ಕೆ.ಎನ್.ರವಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜೆ.ಕಷ್ಣ, ವಾಣಿಜ್ಯ ವಿಭಾಗದ ಮುಖ್ಯಸ್ಥ ಮಾರುತಿ ಅಕ್ಕಿ, ಉಪನ್ಯಾಸಕರಾದ ಡಾ.ಸತೀಶ್, ಡಾ.ಹನುಮಂತ, ಬಿ.ಸುನಂದಾ, ಡಾ.ಮಂಜುಳಾ, ಡಾ.ಶಿಲ್ಪಾ ದಿವಟರ್, ಮಲ್ಲಯ್ಯ ಇತರರಿದ್ದರು.