ಈಡಿಗ ಸಮಾಜದ ಅಭಿವೃದ್ಧಿಗೆ ಹಮ್ಮಿಕೊಂಡಿರುವ ಪಾದಯಾತ್ರೆ ನಿಮಿತ್ತ ಗಂಗಾವತಿ ತಾಲೂಕಿನ ಶ್ರೀರಾಮನಗರದ ರಾಮಲಿಂಗೇಶ್ವರ ದೇವಾಲಯದಲ್ಲಿ ಸ್ಥಳೀಯ ಈಡಿಗ ಸಮುದಾಯದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಪ್ರಣವಾನಂದ ಸ್ವಾಮೀಜಿ ಮಾತನಾಡಿದರು. ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಪ್ರಮುಖರಾದ ಕೆ.ಸುಬ್ರಮಣ್ಯೇಶ್ವರರಾವ್, ಹರಿಬಾಬು, ಪಿಲ್ಲಿ ರಾಮಕೃಷ್ಣ ಇತರರಿದ್ದರು.
ಒಂದು ಸಮುದಾಯಕ್ಕೆ ಸೀಮಿತರಾದ ಸಿಎಂ
ಗಂಗಾವತಿ: ರಾಜ್ಯ ಸರ್ಕಾರ ಈಡಿಗ ಸಮುದಾಯವನ್ನು ನಿರ್ಲಕ್ಷಿಸುತ್ತಿದ್ದು, ಸಿಎಂ ಸಿದ್ದರಾಮಯ್ಯ ಒಂದು ಸಮುದಾಯಕ್ಕೆ ಸೀಮಿತರಾಗಿದ್ದಾರೆ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪೀಠಾಧಿಪತಿ ಡಾ.ಪ್ರಣವಾನಂದ ಸ್ವಾಮೀಜಿ ಹೇಳಿದರು.
ಈಡಿಗ ಸೇರಿ 26 ಪಂಗಡಗಳ ಅಭಿವೃದ್ಧಿಗಾಗಿ ಆಯೋಜಿಸಿರುವ ಪಾದಯಾತ್ರೆ ನಿಮಿತ್ತ ತಾಲೂಕಿನ ಶ್ರೀರಾಮನಗರದ ರಾಮಲಿಂಗೇಶ್ವರ ದೇವಾಲಯದಲ್ಲಿ ಸ್ಥಳೀಯ ಈಡಿಗ ಸಮುದಾಯದಿಂದ ಬುಧವಾರ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಜೆಪಿ ಆಡಳಿತಾವಧಿಯಲ್ಲಿ ಈಡಿಗ ಸಮುದಾಯಕ್ಕೆ ನಿಗಮ ಸ್ಥಾಪನೆಯಾಗಿದ್ದು, 100 ಕೋಟಿ ರೂ. ಅನುದಾನ ಮೀಸಲಿಟ್ಟಿತ್ತು. ಕಾಂಗ್ರೆಸ್ ಸರ್ಕಾರ ನಯಾಪೈಸೆ ನೀಡುತ್ತಿಲ್ಲ. ಸಮುದಾಯದವರ ಕುಲಕಸಬು ಕಿತ್ತುಕೊಂಡರೂ ಸೂಕ್ತ ಪರಿಹಾರ ನೀಡುವಲ್ಲಿ ಸರ್ಕಾರ ವಿಲವಾಗಿದೆ ಎಂದರು.
ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಮಾತನಾಡಿ, ಸಮುದಾಯದ ಹಕ್ಕೋತ್ತಾಯ ನ್ಯಾಯಯುತವಾಗಿದ್ದು, ಪಾದಯಾತ್ರೆ ಮೂಲಕ ಶ್ರೀಗಳು ರಾಜ್ಯ ಸರ್ಕಾರ ಗಮನಸೆಳೆಯುತ್ತಿದ್ದಾರೆ. ಸಮುದಾಯದ 18 ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕಿದೆ ಎಂದರು.
ಪ್ರಮುಖರಾದ ಕೆ.ಸುಬ್ರಮಣ್ಯೇಶ್ವರರಾವ್, ಹರಿಬಾಬು, ಪಿಲ್ಲಿ ರಾಮಕೃಷ್ಣ, ಸತ್ಯಬಾಬು, ರೆಡ್ಡಿ ವೀರರಾಜು, ಸರಾಲ ಶ್ರೀನಿವಾಸ, ಜಿ.ಸಾಂಬಮೂರ್ತಿ, ಅಯೋಧ್ಯಾ ಬಸವರಾಜ, ಕೆ.ಸೂರ್ಯಬಾಬು, ಚೀಕಟ್ಲ ಮೋಹನಕೃಷ್ಣ, ಪಿಲ್ಲಿ ರಂಗರಾವ್, ಪಿಲ್ಲಿ ಕೃಷ್ಣ, ಬಿ.ನಾಗಭೂಷಣ, ಜಿ.ರಾಮಕೃಷ್ಣ, ವೆಂಕಟರತ್ನಂ, ಎಂ.ಡಿ.ರಫೀ ಇತರರಿದ್ದರು.