ಕುಷ್ಟಗಿಯ ಬಿಇಒ ಕಚೇರಿ ಹತ್ತಿರದ ಶಾಲೆಯಲ್ಲಿ ಜುಮಲಾಪೂರ ಕ್ಲಸ್ಟರ್ ಮಟ್ಟದ ಶಾಲೆಗಳಿಗೆ ಪುಸ್ತಕ ನೋಡಲ್ ಅಧಿಕಾರಿ ಶಿವಾನಂದ ಪಂಪಣ್ಣನವರ್ ಪುಸ್ತಕ ವಿತರಿಸಿದರು. ಮುಖ್ಯಶಿಕ್ಷಕ ಸೋಮನಗೌಡ ಪಾಟೀಲ್, ಜುಮಲಾಪೂರು ಸಿಆರ್‌ಪಿ ಸೋಮಲಿಂಗಪ್ಪ, ಶಿಕ್ಷಕ ಜುಮಲಾಪುರ ನಾಗಪ್ಪ ಇದ್ದರು.
- ಪುಸ್ತಕ ನೋಡಲ್ ಅಧಿಕಾರಿ ಶಿವಾನಂದ ಪಂಪಣ್ಣನವರ್ ಹೇಳಿಕೆ
- ಪುಸ್ತಕ ವಿತರಣೆ
ಕುಷ್ಟಗಿ: ಶಾಲೆ ಆರಂಭಕ್ಕೂ ಮುನ್ನ ಪಠ್ಯ ಪುಸ್ತಕ ವಿತರಿಸಲಾಗಿದೆ ಎಂದು ಪುಸ್ತಕ ನೋಡಲ್ ಅಧಿಕಾರಿ ಶಿವಾನಂದ ಪಂಪಣ್ಣನವರ್ ಹೇಳಿದರು.
ಪಟ್ಟಣದ ಬಿಇಒ ಕಚೇರಿ ಹತ್ತಿರದ ಶಾಲೆಯಲ್ಲಿ ತಾಲೂಕಿನ ಜುಮಲಾಪೂರು ಕ್ಲಸ್ಟರ್ ಮಟ್ಟದ ಸರ್ಕಾರಿ ಶಾಲೆಗಳಿಗೆ ಮಂಗಳವಾರ ಪುಸ್ತಕ ವಿತರಿಸಿ ಮಾತನಾಡಿದರು. ಈಗಾಗಲೇ ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೆ ಪುಸ್ತಕ ರವಾನಿಸಲಾಗಿದೆ. ಮೇ 29 ರಂದು ಶಾಲೆಗೆ ಬರುವ ಎಲ್ಲ ಮಕ್ಕಳಿಗೂ ಪುಸ್ತಕ ವಿತರಿಸಿ ಮಕ್ಕಳನ್ನು ಶಾಲೆಗೆ ಕರೆತರುವ ಜವಾಬ್ದಾರಿ ಶಿಕ್ಷಕರದ್ದು ಎಂದರು. ಮುಖ್ಯಶಿಕ್ಷಕ ಸೋಮನಗೌಡ ಪಾಟೀಲ್, ಜುಮಲಾಪೂರು ಸಿಆರ್‌ಪಿ ಸೋಮಲಿಂಗಪ್ಪ, ಶಿಕ್ಷಕ ಜುಮಲಾಪುರ ನಾಗಪ್ಪ ಇದ್ದರು.