ಕೊಪ್ಪಳದ ಅಶೋಕ ವೃತ್ತದಲ್ಲಿ ಕಿತ್ತು ನೆತಾಡುತ್ತಿದ್ದ ಹಸಿರು ಹೊದಿಕೆಯನ್ನು ತೆರವುಗೊಳಿಸಿರುವುದು. 
ಕೊಪ್ಪಳ

ಸಿಗ್ನಲ್ ಬಳಿ ತೂರಾಡುತ್ತಿದ್ದ ಹಸಿರು ಹೊದಿಕೆ ತೆರವು

ಪ್ರಮುಖ ಮುಖ್ಯಾಂಶಗಳು

  • ಎಚ್ಚೆತ್ತ ಅಧಿಕಾರಿಗಳು
  • ಕ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ
ಕೊಪ್ಪಳ: ನಗರದ ಬಸವೇಶ್ವರ ವೃತ್ತ ಹಾಗೂ ಅಶೋಕ ವೃತ್ತಗಳ ಸಿಗ್ನಲ್ ಬಳಿ ಕಿತ್ತುಹೋಗಿ ಗಾಳಿಗೆ ತೂರಾಡುತ್ತಿದ್ದ ಹಸಿರು ಹೊದಿಕೆಯನ್ನು ನಗರಸಭೆ ಅಧಿಕಾರಿಗಳು ತ್ವರಿತವಾಗಿ ತೆರವುಗೊಳಿಸಿದ್ದಾರೆ.
ಬೇಸಿಗೆಯ ತಾಪದಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ನೆರಳು ಒದಗಿಸುವ ಉದ್ದೇಶದಿಂದ ಅಳವಡಿಸಲಾಗಿದ್ದ ಹಸಿರು ಹೊದಿಕೆಯ ಒಂದು ಭಾಗ ಕಳೆದ ಹಲವು ದಿನಗಳಿಂದ ಕಿತ್ತುಹೋಗಿ ರಸ್ತೆಯ ಮೇಲ್ಭಾಗದಲ್ಲಿ ನೇತಾಡುತ್ತಿತ್ತು. ಗಾಳಿಯ ವೇಗಕ್ಕೆ ಅನುಗುಣವಾಗಿ ಅತ್ತಿತ್ತ ತೂರಾಡುತ್ತಿದ್ದ ಕಾರಣ ವಾಹನ ಸವಾರರಲ್ಲಿ ಆತಂಕ ಮೂಡಿತ್ತು. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರಿಗೆ ಅಪಘಾತ ಸಂಭವಿಸುವ ಭೀತಿ ಉಂಟಾಗಿತ್ತು.
ಈ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ಜೂ.11ರಂದು ಕಿತ್ತು ನೇತಾಡುತ್ತಿರುವ ಹಸಿರು ಹೊದಿಕೆ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು. ಇದರಿಂದ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಪಾಯಕಾರಿಯಾಗಿದ್ದ ಹಸಿರು ಹೊದಿಕೆಯನ್ನು ತೆರವುಗೊಳಿಸಿದ್ದಾರೆ. ಅನಾಹುತಗಳನ್ನು ತಪ್ಪಿಸಲು ಅಧಿಕಾರಿಗಳ ತ್ವರಿತ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.