ತಾವರಗೇರಾದ ಐತಿಹಾಸಿಕ ಶ್ರೀ ನರಹರಿ ದೇವಸ್ಥಾನದ ಕಲ್ಯಾಣಿ ಬಳಿ ವಿಶ್ವ ಪರಿಸರ ದಿನದ ನಿಮಿತ್ತ ಸ್ಫೂರ್ತಿ ಯುವಕ ಸಂಘ ಹಾಗೂ ಶ್ರೀ ವಾಸವಿ ಯುವಜನ ಸಂಘ ಸಹಯೋಗದಲ್ಲಿ ಭಾನುವಾರ ಸ್ವಚ್ಛತಾ ಶ್ರಮದಾನ ಹಮ್ಮಿಕೊಳ್ಳಲಾಗಿತ್ತು.
- ಸ್ಫೂರ್ತಿ ಯುವಕ ಸಂಘ ಹಾಗೂ ವಾಸವಿ ಯುವಜನ ಸಂಘ ಸಹಯೋಗ
- ತಾವರಗೇರಾ ಜನರಲ್ಲಿ ಪರಿಸರದ ಜಾಗೃತಿ
ತಾವರಗೇರಾ: ವಿಶ್ವ ಪರಿಸರ ದಿನದ ನಿಮಿತ್ತ ಸ್ಫೂರ್ತಿ ಯುವಕ ಸಂಘ ಹಾಗೂ ಶ್ರೀ ವಾಸವಿ ಯುವಜನ ಸಂಘ ಸಹಯೋಗದಲ್ಲಿ ಇಲ್ಲಿನ ಐತಿಹಾಸಿಕ ಶ್ರೀ ನರಹರಿ ದೇವಸ್ಥಾನದ ಕಲ್ಯಾಣಿ ಬಳಿ ಸ್ವಚ್ಛತಾ ಶ್ರಮದಾನ ಹಮ್ಮಿಕೊಳ್ಳಲಾಗಿತ್ತು.
ಸ್ಫೂರ್ತಿ ಯುವಕ ಸಂಘದ ಸದಸ್ಯರು ಪ್ರತಿ ವರ್ಷವೂ ಪರಿಸರ ಸಂರಕ್ಷಣೆಯ ಚಟುವಟಿಕೆಗಳನ್ನು ಕೈಗೊಂಡು ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಯಾರಿಂದಲೂ ಸಹಾಯ ಕೋರದೆ ಸ್ವಯಂಪ್ರೇರಿತರಾಗಿ ಮಾಡುವ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಭಾನುವಾರವೂ ನರಹರಿ ದೇವಸ್ಥಾನದ ಕಲ್ಯಾಣಿಯಲ್ಲಿದ್ದ ತ್ಯಾಜ್ಯವನ್ನು ಹೊರ ಸಾಗಿಸಿದರು.
ಶ್ರೀ ವಾಸವಿ ಯುವಜನ ಸಂಘದ ಅಧ್ಯಕ್ಷ ಮಂಜುನಾಥ್ ಕಂದಗಲ್, ಸ್ಫೂರ್ತಿ ಯುವಕ ಸಂಘದ ಅಧ್ಯಕ್ಷ ಶಾಮ್ ಭಂಗಿ, ಪ್ರಮುಖರಾದ ಪ್ರಶಾಂತ್ ಕ್ಯಾಡೆದ, ಮಂಜುನಾಥ ಚಿನ್ನಾಪುರ, ಸೇರಿದಂತೆ 35ಕ್ಕೂ ಹೆಚ್ಚು ಜನ ಸದಸ್ಯರು ಇದ್ದರು.