ಡಿಸಿ ಡಾ. ಸುರೇಶ ಇಟ್ನಾಳ  
ಕೊಪ್ಪಳ

ಹುಲಿಗಿ ಕ್ಷೇತ್ರ ಸ್ವಚ್ಚಗೋಳಿಸಿ ನದಿಗೆ ನೀರರಿಸಿ

ಪ್ರಮುಖ ಮುಖ್ಯಾಂಶಗಳು

  • ಡಿಸಿ ಡಾ. ಸುರೇಶ ಇಟ್ನಾಳ ಸೂಚನೆ
ಕೊಪ್ಪಳ : ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡಿ ಮತ್ತು ತುಂಗಭದ್ರ ಆಣೆಕಟ್ಟೆಯಿಂದ ಹುಲಿಗಿ ನದಿಗೆ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಸೂಚಿಸಿದ್ದಾರೆ.
ಕ್ಷೇತ್ರದ ಸ್ವಚ್ಚತೆಗಾಗಿ ದೇವಸ್ಥಾನದಿಂದ ಹೆಚ್ಚುವರಿಯಾಗಿ 50 ಜನ ಸ್ವಚ್ಛತಾ ಸಿಬ್ಬಂದಿಗಳನ್ನು ತೆಗೆದುಕೊಳ್ಳಬೇಕು. ದೇವಸ್ಥಾನಸ ಆವರಣ, ಮುದ್ದಮ್ಮನ ಕಟ್ಟೆ, ನಂದಿ ಸರ್ಕಲ್​, ನದಿ ತೀರದ ಹತ್ತಿರ ಹೀಗೆ ಹುಲಿಗಿಯ ಎಲ್ಲಾ ಏರಿಯಾಗಳನ್ನು ಹಂಚಿಕೆ ಮಾಡಿ. ಅವುಗಳ ಸ್ವಚ್ಛತೆಯ ಸಂಪೂರ್ಣ ಜವಾಬ್ದಾರಿಯನ್ನು ಪ್ರತಿಯೊಂದು ತಂಡಕ್ಕೆ ನೀಡಿ, ಹಸಿಕಸ ಮತ್ತು ಒಣಕಸವನ್ನು ಹೊಸಹಳ್ಳಿ ಕಸವಿಲೇವಾರಿ ಘಟಕಕ್ಕೆ ಕಳುಹಿಸಬೇಕು. ಯಾವುದೇ ರೀತಿಯ ರೋಗಗಳು ಬರದಂತೆ ಮುಂಜಾಗ್ರತೆ ವಹಿಸಿ. ಬ್ಲೀಚಿಂಗ ಪೌಡರ್​, ಫಿನಾಯಿಲ್​ಗಳನ್ನು ಸಿಂಪಡಿಸಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ಕೊಡಿ. ಜಾತ್ರೆಯ ನಂತರ ಹುಲಿಗಿ ಗ್ರಾಮದ ಪ್ರಮುಖ ರಸ್ತೆಗಳು, ಶಾಲೆಗಳು, ಬಸ್​ ನಿಲ್ದಾಣ ಮುಂತಾದ ಕಡೆ ಸ್ವಚ್ಚತೆಗೂ ಅಗತ್ಯ ಕ್ರಮ ಕೈಗೊಳ್ಳಲು ಕೊಪ್ಪಳ ನಗರಸಭೆಯಿಂದ ಸಕ್ಕಿಂಗ್​ ಮಷಿನ್​-1 ನ್ನು ಸ್ವಚ್ಛತೆ ಮಾಡಲು ಪಡೆತಲು ಸೂಚಿಸಿದರು.
ಜಾತ್ರೆ ಪ್ರಾರಂಭವಾಗುವ ಪೂರ್ವದಲ್ಲಿ ಹಾಗೂ ಜಾತ್ರಾ ನಂತರ ಗ್ರಾಮದ ವ್ಯಾಪ್ತಿಗೆ ಬರುವ ಎಲ್ಲಾ ಚರಂಡಿಗಳನ್ನು ಸ್ವಚ್ಚಗೊಳಿಸಿ ಬ್ಲೀಚಿಂಗ್​ ಪೌಡರ್​ ಹಾಕಬೇಕು. ನೀರಿನ ಟ್ಯಾಂಕ್​ಗಳಿಗೆ ಬ್ಲೀಚಿಂಗ್​ ಪೌಡರ್​ ಹಾಕಿ ಸ್ವಚ್ಚಗೊಳಿಸಿ. ಸೊಳ್ಳೆಗಳ ನಿಯಂತ್ರಣಕ್ಕಾಗಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಿ. ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೇ 10 ರಿಂದ ಮೇ 14ರ ವರೆಗೆ, ಜಾತ್ರೆಗೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಕುಡಿಯುವ ನೀರಿನ ಅನಾನುಕೂಲವಾಗದಂತೆ ತುಂಗಭದ್ರ ಆಣೆಕಟ್ಟೆಯಿಂದ ನದಿಗೆ ನೀರು ಬಿಡಲು ಮುನಿರಾಬಾದ್​ ನೀರಾವರಿ ಇಲಾಖೆ, ಟಿ.ಬಿ.ಬೋರ್ಡ ಟಿ.ಬಿಡ್ಯಾಂನ ಮುಖ್ಯ ಕಾರ್ಯಪಾಲಕ ಅಭಿಯಂತರರು ಹಾಗೂ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಸೂಕ್ತ ಕ್ರಮ ವಹಿಸಲು ತಿಳಿಸಿದ್ದಾರೆ.