ಕಾರ್ಮಿಕ ಸಂಹಿತೆ ವಿರೋಧಿಸಿ ಸಿಐಟಿಯು ಪದಾಧಿಕಾರಿಗಳು ಬುಧವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರಾದ - ಹನುಮೇಶ ಕಲ್ಮಂಗಿ, ಅಮರೇಶ ಡಾಣಿ, ಕಂಠಿ ಬಸವರಾಜ, ಶರಣಪ್ಪ, ರವಿ ಜೋಶಿ, ರಾಮಕೃಷ್ಣ, ಕಾಸಿಂ ಸರ್ದಾರ್ ಇದ್ದರು.
- ಕೇಂದ್ರದ ಕಾರ್ಮಿಕ ಸಂಹಿತೆಗಳಿಗೆ ವಿರೋಧ
- ವಾಪಸ್ ಪಡೆಯುವಂತೆ ಆಗ್ರಹ
ಕೊಪ್ಪಳ:ಕೇಂದ್ರದ ಕಾರ್ಮಿಕ ಸಂಹಿತೆ ಖಂಡಿಸಿ ಸಿಐಟಿಯು ಜಿಲ್ಲಾ ಪದಾಧಿಕಾರಿಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಂದಿನಿಂದ ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆ ಜಾರಿಗೊಳಿಸುತ್ತಿದೆ. ಕಾರ್ಮಿಕರ ಪಾಲಿಗೆ ಇದು ಕರಾಳ ದಿನ. ಈ ಹಿನ್ನೆಲೆಯಲ್ಲಿ ದೇಶ, ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ನಾವು ಕೈಗೆ ಕಪು$್ಪಪಟ್ಟಿ ಕಲ್ಲಿ ವಿರೋಧಿಸುತ್ತಿದ್ದೇವೆ. ಕೇಂದ್ರದ ಸರ್ವಾಧಿಕಾರಿ ನೀತಿ, ಕಾರ್ಮಿಕ ವಿರೋಧಿ ನಡೆ, ಕಾರ್ಮಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡದಿರುವುದಕ್ಕೆ ಖಂಡನೆ ವ್ಯಕ್ತಪಡಿಸಿದರು.
ಪ್ರತಿಭಟನಕಾರರಾದ - ಹನುಮೇಶ ಕಲ್ಮಂಗಿ, ಅಮರೇಶ ಡಾಣಿ, ಕಂಠಿ ಬಸವರಾಜ, ಶರಣಪ್ಪ, ರವಿ ಜೋಶಿ, ರಾಮಕೃಷ್ಣ, ಕಾಸಿಂ ಸರ್ದಾರ್, ಕಳಕೇಶ, ವೀರಯ್ಯ ಹಿರೇಮಠ, ಉಮರ್, ಸಣ್ಣಮ್ಮ ಗುಂಡಣ್ಣವರ, ಪಾರ್ವತಮ್ಮ, ಲಕ್ಷ$್ಮಮ್ಮ ನಡಿಗೇರಿ ಇತರರಿದ್ದರು.