ಕೊಪ್ಪಳದ ಸಂತ ಫ್ರಾನ್ಸಿಸ್ ಡಿ ಸೇಲ್ಸ್ ಚರ್ಚ್ನಲ್ಲಿ ಗುರುವಾರ ಕ್ರಿಸ್ಮಸ್ ಆಚರಣೆಯಲ್ಲಿ ಶಾಸಕ ರಾವೇಂದ್ರ ಹಿಟ್ನಾಳ ಭಾಗಿಯಾದರು. ಪಾಧರ್ ಜೆ.ರವಿಕುಮಾರ್, ವಕೀಲರ ಸಂದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ವಿರುಪಣ್ಣ ನವೋದಯ ಇದ್ದರು.
- ಶಾಸಕ ರಾಘವೇಂದ್ರ ಹಿಟ್ನಾಳ ಸೇರಿ ಇತರರು ಭಾಗಿ
ಕೊಪ್ಪಳ: ಕ್ರಿಶ್ಚಿಯನ್ನರ ಪವಿತ್ರ ಹಬ್ಬವಾದ ಕ್ರಿಸ್ಮಸ್ ಗುರುವಾರ ನಗರಾದ್ಯಂತ ಸಡಗರ&ಸಂಭ್ರಮದಿಂದ ಆಚರಿಸಿದ್ದು ಕಂಡುಬಂತು. ಶಾಸಕ ರಾಘವೇಂದ್ರ ಹಿಟ್ನಾಳ ಸೇರಿ ಇತರ ಗಣ್ಯರು ನಗರದ ಚರ್ಚ್ಗಳಿಗೆ ಭೇಟಿ ನೀಡಿ ಶುಭಕೋರಿ ಹಬ್ಬ ಆಚರಿಸಿದರು.
ನಂತರ ಮಾತನಾಡಿ, ಯೇಸುಕ್ರಿಸ್ತ ಅವರ ಬೋಧನೆ ನಮಗೆಲ್ಲ ದಾರಿ ದೀಪ. ಸನ್ಮಾರ್ಗದಲ್ಲಿ ನಡೆಯೋಣ. ಯೇಸು ಸಾಮಾನ್ಯ ಹಟ್ಟಿಯಲ್ಲಿ ಹುಟ್ಟಿ ಅಸಾಮಾನ್ಯವಾಗಿ ಬೆಳದರು. ತನ್ನನ್ನೇ ಉರಿಸಿಕೊಂಡು ಜಗತ್ತಿಗೆ ಬೆಳಕು ನೀಡಿದರು. ದೇವ ಮಾನವರಾದರು. ಬೈಬಲ್ ಕೇವಲ ಕೆಸ್ತರಿಗಷ್ಟೇ ಅಲ್ಲ ಎಲ್ಲರಿಗೂ ಸದ್ಭಾವನಾ ಗ್ರಂಥ ಎಂದರು.
ಸಂತ ಫ್ರಾನ್ಸಿಸ್ ಡಿ ಸೇಲ್ಸ್ ಚರ್ಚ್, ಗಣೇಶ ನಗರದ ುಲ್ ಗೋಸ್ಪೆಲ್ ಚರ್ಚ್ ಆ್ ಕೆಸ್ತ್, ನಗರಸಭೆ ಹಿಂಭಾಗದ ಚರ್ಚ್ನಲ್ಲಿ ಬೆಳಗ್ಗೆಯಿಂದಲೇ ಹಬ್ಬದ ಚಟುವಟಿಕೆ ಕಂಡುಬಂದವು. ಮಹಿಳೆ, ಪುರುಷ, ಮಕ್ಕಳು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಸಾಮೂಹಿಕ ಪ್ರಾರ್ಥನೆ ನಡೆದವು. ಜನಪ್ರತಿನಿಧಿಗಳು ಸೇರಿ ಇತರ ಗಣ್ಯರು ಭಾಗಿಯಾಗಿ ಪರಸ್ಪರ ಶುಭಾಶಯ ಕೋರಿದರು. ಸಿಹಿ ಹಂಚಿ ಖುಷಿಪಟ್ಟರು. ಚರ್ಚಗಳು ವಿದ್ಯುತ್ ದೀಪಾಲಂಕಾರದಲ್ಲಿ ಜಗಮಗ ಮಿಂಚಿದವು.
ಪಾಧರ್ ಜೆ.ರವಿಕುಮಾರ್, ಪಾಧರ್ ಜೇ ಪೀಟರ್ ಜೇಮ್ಸ್ ಇನ್ನಿತರ ಯೇಸುವಿನ ಪ್ರಾರ್ಥನೆ ಬೋದಿಸಿದರು. ವಕೀಲರ ಸಂದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ವಿರುಪಣ್ಣ ನವೋದಯ ಇತರರಿದ್ದರು.