ಶ್ರೀರಾಮನಗರದ ಅಂಗನವಾಡಿ ಕೇಂದ್ರದಲ್ಲಿ ಸಿಡಿಪಿಒ ಇಲಾಖೆಯಿಂದ ಶಾಲಾ ಪೂರ್ವ ಶಿಕ್ಷಣ ಪೂರ್ಣಗೊಳಿಸಿದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಮೇಲ್ವಿಚಾರಕಿ ಸುಕನ್ಯಾ, ಶಿಕ್ಷಣ ಇಲಾಖೆ ಸಿಆರ್‌ಪಿ ಮಹೇಶ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕರಾದ ಖಿರು ಪವಾರ್, ರೇಣುಕಾ ಇತರರಿದ್ದರು. 
ಕೊಪ್ಪಳ

ಅಂಗನವಾಡಿಯಲ್ಲಿ ಮಕ್ಕಳ ಘಟಿಕೋತ್ಸವ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಶಾಲಾ ಪೂರ್ವ ಶಿಕ್ಷಣದ ಪ್ರಮಾಣಪತ್ರ ವಿತರಣೆ
  • ಚಿಣ್ಣರ ಕಲಿಕಾ ಸಾಮರ್ಥ್ಯಕ್ಕೆ ಪಾಲಕರು ಸಂಭ್ರಮ
ಗಂಗಾವತಿ: ಶ್ರೀರಾಮನಗರದ ಒಂದನೇ ವಾರ್ಡ್‌ನ 12ನೇ ಅಂಗನವಾಡಿ ಕೇಂದ್ರದಲ್ಲಿ ಸಿಡಿಪಿಒ ಇಲಾಖೆಯಿಂದ ಶಾಲಾ ಪೂರ್ವ ಶಿಕ್ಷಣ ಪೂರ್ಣಗೊಳಿಸಿದ ಮಕ್ಕಳಿಗಾಗಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಮೂರು ವರ್ಷ ಕಾಲ ಕಳೆದ ಮಕ್ಕಳನ್ನು ಪ್ರಾಥಮಿಕ ಶಾಲೆಗೆ ಕಳುಹಿಸಿಕೊಡುವ ಅಂಗವಾಗಿ ಅವರು ಕೇಂದ್ರದಲ್ಲಿ ಪಡೆದ ಕಲಿಕೆಯ ಬಗ್ಗೆ ವಸ್ತು ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನಡೆಯಿತು. ವಸ್ತು ಪ್ರದರ್ಶನದ ಮಾಹಿತಿಯನ್ನು ಮಕ್ಕಳೇ ನಿರ್ವಹಿಸಿದ್ದು, ಪಾಲಕರು ಮತ್ತು ಸಿಡಿಪಿಒ ಸಿಬ್ಬಂದಿ ಸಂಭ್ರಮಿಸಿದರು.
ಘಟಿಕೋತ್ಸವ ಮಾದರಿಯಲ್ಲಿ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿ, ಮುಂದಿನ ಪ್ರಾಥಮಿಕ ಶಿಕ್ಷಣದ ಕುರಿತು ಮಾಹಿತಿ ನೀಡಲಾಯಿತು. ಮೇಲ್ವಿಚಾರಕಿ ಸುಕನ್ಯಾ ಮಾತನಾಡಿ, ಕಲಿಕೆಯ ಬಗ್ಗೆ ಪ್ರೇರಣೆ ನೀಡಲು ಹೊಸ ರೀತಿಯಲ್ಲಿ ಮಕ್ಕಳ ಘಟಿಕೋತ್ಸವ ಆಯೋಜಿಸಿದ್ದು, ಪಾಲಕರಿಂದಲೂ ಉತ್ತಮ ಸ್ಪಂದನೆ ದೊರೆತಿದೆ ಎಂದರು. ಇದೇ ವೇಳೆ ಹೊಸದಾಗಿ ಸೇರ್ಪಡೆಯಾದ ಮಕ್ಕಳನ್ನು ಸ್ವಾಗತಿಸಲಾಯಿತು.
ಶಿಕ್ಷಣ ಇಲಾಖೆ ಸಿಆರ್‌ಪಿ ಮಹೇಶ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕರಾದ ಖಿರು ಪವಾರ್, ರೇಣುಕಾ, ಪ್ರಮುಖರಾದ ಬಿ.ಬಿ.ಆತ್ಮ, ಕೃಷ್ಣಂರಾಜು ಸೇರಿದಂತೆ ವಿವಿಧ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಉಪಸ್ಥಿತರಿದ್ದರು.