ಕೊಪ್ಪಳ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ವಸತಿ ನಿಲಯ ಪಾಲಕರಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ವಾನಸಿಕ ಆರೋಗ್ಯ ಹಾಗೂ ವಾದಕ ವಸ್ತುಗಳ ವ್ಯಸನ ತರಬೇತಿ ಕಾರ್ಯಾಗಾರವನ್ನು ಡಿಎಚ್‌ಒ ಟಿ.ಲಿಂಗರಾಜು ಉದ್ಘಾಟಿಸಿದರು. ಮನೋವೈದ್ಯರಾದ ರವಿಕುವಾರ, ಪುಷ್ಪಾ ತೆರೇಸಾ, ವಿ.ಪಿ.ಶಿವಾನಂದ ಇತರರಿದ್ದರು. 
ಕೊಪ್ಪಳ

ಮಕ್ಕಳು ಮಾನಸಿಕ ಆರೋಗ್ಯದ ಕಡೆ ಗಮನವಿರಲಿ

ಪ್ರಮುಖ ಮುಖ್ಯಾಂಶಗಳು

  • ಡಿಎಚ್‌ಒ ಟಿ. ಲಿಂಗರಾಜು ಸಲಹೆ
  • ವಸತಿ ನಿಲಯ ಪಾಲಕರಿಗೆ ತರಬೇತಿ ಕಾರ್ಯಾಗಾರ
ಕೊಪ್ಪಳ: ವಾನಸಿಕ ಮತ್ತು ದೈಹಿಕ ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳು. ವಸತಿ ನಿಲಯಗಳಲ್ಲಿ ಅಭ್ಯಾಸ ವಾಡುತ್ತಿರುವ ವಿದ್ಯಾರ್ಥಿಗಳು ಮಾನಸಿಕ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಡಿಎಚ್‌ಒ ಟಿ. ಲಿಂಗರಾಜು ಹೇಳಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ವಸತಿ ನಿಲಯ ಪಾಲಕರಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ಹಾಗೂ ಮಾದಕ ವಸ್ತುಗಳ ವ್ಯಸನ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ವಸತಿ ನಿಲಯಗಳಲ್ಲಿ ಅಭ್ಯಾಸ ಮಾತ್ತಿರುವ ಹದಿಹರೆಯದ ವಿದ್ಯಾರ್ಥಿಗಳಲ್ಲಿ ವಾನಸಿಕ ಸಮಸ್ಯೆಗಳು ಕಂಡುಬಂದರೆ ತಾಲೂಕು ಅಥವಾ ಜಿಲ್ಲಾಸ್ಪತ್ರೆಗೆ ಸಂಪರ್ಕಿಸಿ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು.
ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿಯೂ ಪ್ರಾಥಮಿಕ ಹಂತದ ವಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಮನೋವೈದ್ಯಡಾ.ರವಿಕುವಾರ ಮಾತನಾಡಿ, ಒತ್ತಡದ ಜೀವನ ಶೈಲಿ, ಆಘಾತಕಾರಿ ಟನೆ ಸೇರಿ ವಿವಿಧ ಕಾರಣಗಳಿಗೆ ಮಾನಸಿಕ ಕಾಯಿಲೆ ಬರುತ್ತದೆ. ವಾದಕ ವಸ್ತುಗಳ ವ್ಯಸನ ಯುವಕರಲ್ಲಿ ಹೆಚ್ಚಾಗಿ ಕಾಣಸಿಕೊಳ್ಳುತ್ತಿದ್ದು, ದೈಹಿಕ ದುಷ್ಪರಿಣಾಮ ಹಾಗೂ ವಾನಸಿಕ ನಿಯಂತ್ರಣ ತಪ್ಪಲಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವಿ.ಪಿ.ಶಿವಾನಂದ, ಮನೋವೈದ್ಯೆ ಪುಷ್ಪಾ ತೆರೇಸಾ, ಜಿಲ್ಲಾ ವಾನಸಿಕ ಆರೋಗ್ಯ ಕಾರ್ಯಕ್ರಮ ಸಿಬ್ಬಂದಿ ಇದ್ದರು.