ಅಳವಂಡಿಯಲ್ಲಿ ಹಮ್ಮಿಕೊಂಡಿದ್ದ ಕ್ಷಯ ರೋಗ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಬಿಎಚ್‌ಇಒ ಗಂಗಮ್ಮ ಮಾತನಾಡಿದರು. ಮುಖ್ಯಶಿಕ್ಷಕ ರಫಿಕ್ ಬಳಿಗಾರ, ಶಿಕ್ಷಕರಾದ ಶಶಿಕುಮಾರ ಬಸೀರಾಬಾನು, ಗಾಯತ್ರಿ, ಎಸ್.ಮೈಬೂಬಿ, ಆರೋಗ್ಯ ಸುರಕ್ಷತಾಧಿಕಾರಿ ಸಾವಿತ್ರಿ ಹಂಚಿನಾಳ, ಆರೋಗ್ಯ ನಿರೀಕ್ಷಣಾಧಿಕಾರಿ ಸೈಯದ್ ಅಬ್ಬಾಸ್ ಇತರರಿದ್ದರು. 
ಕೊಪ್ಪಳ

ಬಾಲ್ಯವಿವಾಹದಿಂದ ಭವಿಷ್ಯ ಹಾಳು

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಬಾಲ್ಯ ವಿವಾಹ
  • ಸಾಮಾಜಿಕ ಪಿಡುಗು
  • ಭವಿಷ್ಯದ ಮೇಲೆ ಕೆಟ್ಟ ಪರಿಣಾಮ

ಬಾಲ್ಯವಿವಾಹದಿಂದ ಭವಿಷ್ಯ ಹಾಳು

ಅಳವಂಡಿ: ಬಾಲ್ಯ ವಿವಾಹ ಸಾಮಾಜಿಕ ಪಿಡುಗು. ಇದರಿಂದ ಹೆಣ್ಣುಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಮ್ಮ ಕಳಸಾಪುರ ಹೇಳಿದರು.
ಗ್ರಾಮದ ಶ್ರೀ ವಿವೇಕಾನಂದ ಪ್ರೌಢಶಾಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಅಳವಂಡಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳು, ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಕ್ಷಯ ರೋಗ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಡತನ, ಮೂಢನಂಬಿಕೆ, ಶಿಕ್ಷಣದ ಕೊರತೆಯಿಂದ ಬಾಲ್ಯ ವಿವಾಹ ನಡೆಯುತ್ತಿದೆ. ಇದನ್ನು ತಡೆಯಲು ಸರ್ಕಾರದ ಜತೆ ಸಮಾಜವೂ ಪ್ರಯತ್ನಿಸಬೇಕು. 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದರೆ ತಾಯಿ-ಮಗು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಬಾಲ್ಯ ವಿವಾಹ ಹುಡುಗಿಯರು ಶಾಲೆ ಬಿಡಲು ಕಾರಣವಾಗುತ್ತಿದ್ದು, ಇದರಿಂದ ಭವಿಷ್ಯ ಹಾಳಾಗಲಿದೆ. ಈ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಕ್ಷಯರೋಗದ ತಾಲೂಕು ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಇಬ್ರಾಹಿಂ ಮಾತನಾಡಿ, ಕ್ಷಯ ಸಾಂಕ್ರಾಮಿಕ ರೋಗವಾಗಿದ್ದು, ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಹರಡುತ್ತದೆ. ಸತತ ಕೆಮ್ಮು, ಕಫದಲ್ಲಿ ರಕ್ತ ಬೀಳುವುದು, ಹಸಿವಾಗದಿರುವುದು, ಸಂಜೆ ಜ್ವರ ಬರುವುದು ಕ್ಷಯದ ಲಕ್ಷಣಗಳಾಗಿವೆ. ಇವು ಕಂಡು ಬಂದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಿರಿ ಎಂದರು. ಬಾಲ್ಯ ವಿವಾಹ ವಿರೋಧಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.