ಚಿಕ್ಕಖೇಡದಲ್ಲಿ ಗುಳೆ ಹೋಗುತ್ತಿರುವ ಪಾಲಕರೊಂದಿಗೆ ಮಕ್ಕಳು ಹೋಗುತ್ತಿರುವುದನ್ನು ಗಮನಿಸಿದ ಶಿಕ್ಷಕ ಹೋಗದಂತೆ ಮನವೊಲಿಸುತ್ತಿರುವುದು.  
ಕೊಪ್ಪಳ

ಬಿಕೋ ಎನ್ನುತ್ತಿರುವ ಚಿಕ್ಕಖೇಡ ಗ್ರಾಮ

ಪ್ರವೀಣ ಉದುಸಾ ದಲಬಂಜನ್
ಕನಕಗಿರಿ: ಬಹುತೇಕರು ಗುಳೆ ಹೋಗಿದ್ದರಿಂದ ತಾಲೂಕಿನ ಚಿಕ್ಕಖೇಡ ಗ್ರಾಮದ ಬಿಕೋ ಎನ್ನುತ್ತಿದೆ.
ಹಿರೇಖೇಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಖೇಡ ಗ್ರಾಮದಲ್ಲಿ ಸುಮಾರು 700 ಜನಸಂಖ್ಯೆಯಿದೆ. ಆದರೆ, ಗ್ರಾಮದ ಜನರಿಗೆ ಕೆಲಸವಿಲ್ಲದೇ ಭತ್ತದ ಸಸಿ ನಾಟಿಗಾಗಿ ನಾನಾ ಕಡೆಗಳಿಗೆ ತೆರಳಿದ್ದಾರೆ. ಇದರಿಂದ ಗ್ರಾಮದಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿದೆ. ಅಲ್ಲಲ್ಲಿ ವೃದ್ಧರು ಹಾಗೂ ಮಕ್ಕಳು ಮಾತ್ರ ಕಾಣ ಸಿಗುತ್ತಿದ್ದಾರೆ. ಇಲ್ಲಿನ ಜನಕ್ಕೆ ನರೇಗಾ ಯೋಜನೆಯ ಕೆಲಸ ಸಮರ್ಪಕವಾಗಿ ನೀಡದಿರುವುದೇ ಗುಳೆ ಹೋಗಲು ಕಾರಣವೆನ್ನಲಾಗಿದೆ.
"

ಪ್ರತಿ ವರ್ಷವೂ ಅಲ್ಲಿನ ಜನತೆ ಗುಳೆ ಹೋಗುತ್ತಾರೆ ಎಂಬುದಾಗಿ ತಿಳಿದು ಬಂದಿದೆ,. ಹೀಗೆ ಗುಳೆ ಹೋಗುವವರನ್ನು ತಡೆಯಲು ಗ್ರಾಪಂ ಪಿಡಿಒ ಶ್ರಮ ವಹಿಸಿದ್ದರೂ ಸಹ ಗುಳೆ ಹೋಗಿದ್ದಾರೆ. ಇದನ್ನು ತಡೆಯಲು ಕ್ರಮ ವಹಿಸಲಾಗುವುದು.

ಗ್ರಾಪಂನಿಂದ ನರೇಗಾ ಕೆಲಸವನ್ನು ಈ ಸಮಯದಲ್ಲಿ ನೀಡುತ್ತಿಲ್ಲ. ಕೃಷಿ ಚಟುವಟಿಕೆ ಇದ್ದಾಗ ನೀಡಲಾಗುತ್ತಿದೆ. ಹೀಗಾಗಿ ಊರಲ್ಲಿ ಶೇ.50 ಜನ ಉದ್ಯೋಗ ಅರಸಿ ಗುಳೆ ಹೋಗಿದ್ದಾರೆ.

ಶಾಲೆಯ ಮಕ್ಕಳು ಗುಳೆ ಹೋಗುವುದನ್ನು ಗಮನಿಸಿ ವಾಹನದ ಬಳಿ ಪಾಲಕರ ಮನವೊಲಿಸಿ ನಾಲ್ಕೈದು ಮಕ್ಕಳು ಹೋಗುವುದನ್ನು ತಪ್ಪಿಸಿದ್ದೇನೆ. ಆದರೂ ಮೂರ‌್ನಾಲ್ಕು ಮಕ್ಕಳು ಪಾಲಕರೊಂದಿಗೆ ತೆರಳಿದ್ದಾರೆ.