ಅಳವಂಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಪ್ರಮುಖರಾದ ಗುರುರಾಜ, ಪರಪ್ಪ, ಗುರುಬಸವರಾಜ, ರಾಮರೆಡ್ಡಿ, ಹನುಮಂತಪ್ಪ, ಸೋಮರೆಡ್ಡಿ ಇತರರು ಇದ್ದರು.  
ಕೊಪ್ಪಳ

ಸರ್ಕಾರದ ಮಾರ್ಗಸೂಚಿಯಡಿ ಕಡಲೆ ಖರೀದಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಕ್ವಿಂಟಾಲ್
  • ಕಡಲೆ
  • ಖರೀದಿ
ಅಳವಂಡಿ: ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಖರೀದಿ ಮಾಡುತ್ತಿದ್ದು ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೆಎ್ಸಿಎಮ್ಎ್ ಮಾರುಕಟ್ಟೆ ವ್ಯವಸ್ಥಾಪಕ ಗುರುರಾಜ ತಿಳಿಸಿದರು.
ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಬೆಂಬಲ ಬೆಲೆ ಯೋಜನೆಯಡಿ 2025-26ನೇ ಸಾಲಿನ ಕಡಲೆ ಖರೀದಿ ಕೇಂದ್ರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ರೈತರು ಸರ್ಕಾರ ನಿಗದಿಪಡಿಸಿದ ಮಾನದಂಡದ ಕಡಲೆಯನ್ನು ಪೂರೈಸಬೇಕು. ಪ್ರತಿ ರೈತರಿಗೆ ಎಕರೆಗೆ 4ಕ್ವಿಂಟಾಲ್ನಂತೆ ಗರಿಷ್ಠ 40ಕ್ವಿಂಟಾಲ್ ಕಡಲೆಯನ್ನು ಖರೀದಿ ಮಾಡಲಾಗುತ್ತದೆ.
ಕ್ವಿಂಟಾಲ್‌ಗೆ 5,875ರೂ. ದರ ನಿಗದಿ ಪಡಿಸಿದೆ ಎಂದರು. ಅಧ್ಯಕ್ಷ ಪರಪ್ಪ ನಾಗರಹಳ್ಳಿ, ಪ್ರಮುಖರಾದ ಗುರುಬಸವರಾಜ ಹಳ್ಳಿಕೇರಿ, ರಾಮರೆಡ್ಡಿ ಜೋಳದ, ಹನುಮಂತಪ್ಪ ಕರಡಿ, ಸೋಮರೆಡ್ಡಿ ಮುತ್ತಾಳ, ಪ್ರಕಾಶ ಕುಂಬಾರ, ಪಕೀರಮ್ಮ ಕಟ್ಟಿಮನಿ, ಗುರುರಾಜ, ಶಂಕ್ರಪ್ಪ ಕ್ವಾಗಳಿ, ಬಸಪ್ಪ ಹೊಳೆಯಾಚಿ, ಸಾಯಿಬಾಬಾ, ಕೊಟ್ರಯ್ಯ ಮುಂಡರಗಿಮಠ, ಗೋಣೆಪ್ಪ ವಡ್ಡರ, ಲೋಕಪ್ಪ ಹೊಟ್ಟಿ, ಶಂಕರಪ್ಪ, ಗ್ಯಾನಪ್ಪ ಹಳ್ಳಿಕೇರಿ, ಕಾರ್ಯದರ್ಶಿ ಬಸವರಾಜ ಏಳುಭಾವಿ ಇತರರು ಇದ್ದರು.