ಮುದಗಲ್‌ನಲ್ಲಿ ಛತ್ರಪತಿ ಶಿವಾಜಿ ಜಯಂತಿ ಪ್ರಯುಕ್ತ ಹಿಂದೂ ಪರ ಸಂಘಟನೆಗಳಿಂದ ಬೃಹತ್ ಶೋಭಾಯಾತ್ರೆ ನಡೆಯಿತು. 
ಕೊಪ್ಪಳ

ಛತ್ರಪತಿ ಶಿವಾಜಿ ಶೋಭಾಯಾತ್ರೆ ಅದ್ದೂರಿ

ಮುದಗಲ್: ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿ ಪ್ರಯುಕ್ತ ಪಟ್ಟಣದಲ್ಲಿ ಭಾನುವಾರ ಹಿಂದೂ ಪರ ಸಂಘಟನೆಗಳಿಂದ ಬೃಹತ್ ಶೋಭಾಯಾತ್ರೆ ಜರುಗಿತು.
ಲಿಂಗಸಗೂರು ಮುಖ್ಯ ರಸ್ತೆಯಲ್ಲಿನ ಬನ್ನಿ ಮಂಟಪಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶಿವಾಜಿ ಶೋಭಾಯಾತ್ರೆಗೆ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷೆ ಶಶಿಕಲಾ ಭೋವಿ ಚಾಲನೆ ನೀಡಿದರು.
ಬಳಿಕ ಪೊಲೀಸ್ ಠಾಣೆ, ಛಾವಡಿಕಟ್ಟೆ ರಸ್ತೆ, ಹಳೆಯ ಕಿರಾಣಿ ರಸ್ತೆ ಮಾರ್ಗವಾಗಿ ಹೂಗಾರ ಓಣಿ ಮೂಲಕ ಕುಂಬಾರ ಪೇಟೆಯ ಬಸವೇಶ್ವರ ದೇವಸ್ಥಾನ ತಲುಪಿತು. ಮೆರವಣಿಗೆಯುದ್ದಕ್ಕೂ ಡಿಜೆ ಹಾಡುಗಳಿಗೆ ಯುಕವರು ಕುಣಿದು ಕುಪ್ಪಳಿಸಿದರು. ಯಾವುದೇ ಅಹಿತಕರ ಘಟನೆಗಳಾಗದಂತೆ ಅಗತ್ಯ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಎಸ್ಪಿ ಅರುಣಾಂಗ್ಶು ಗಿರಿ ಭೇಟಿ ನೀಡಿ ಪರಿಶೀಲಿಸಿದರು.
ಎಎಸ್ಪಿ ಜೆ.ಕುಮಾರಸ್ವಾಮಿ, ಗುಪ್ತಚರ ಇಲಾಖೆ ಡಿವೈಎಸ್ಪಿ ರಾಜಕುಮಾರ್ ವೈಜಯಂತಿ, ಲಿಂಗಸಗೂರು ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ್, ಮಸ್ಕಿ ಸಿಪಿಐ ರಾಮಣ್ಣ ಜಲಗಾರ್, ಮುದಗಲ್ ಪಿಎಸ್‌ಐ ವೆಂಕಟೇಶ ಮಾಡಗಿರಿ ಸೇರಿದಂತೆ 6 ಜನ ಸಿಪಿಐ, 10 ಜನ ಪಿಎಸ್‌ಐ, 7 ಜನ ಎಎಸ್‌ಐ, 65 ಕ್ಕೂ ಹೆಚ್ಚು ಸಿಬ್ಬಂದಿ, ನಾಲ್ಕು ಡಿಆರ್ ತುಕಡಿಯ ಸರ್ಪಗಾವಲಿನಲ್ಲಿ ಶೋಭಾಯಾತ್ರೆ ನಡೆಯಿತು.
ಪ್ರಮುಖರಾದ ಡಾ.ಗುರುರಾಜ ದೇಶಪಾಂಡೆ, ಡಾ. ಶರಣಬಸವ ಪಾಟೀಲ್ ವ್ಯಾಕರನಾಳ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸಿದ್ದರಾಮೇಶ ಪಾಗದ, ಮುಖಂಡರಾದ ತಮ್ಮಣ್ಣ ಗುತ್ತೇದಾರ, ಗುಂಡಪ್ಪ ಗಂಗಾವತಿ, ಸಣ್ಣ ಸಿದ್ದಯ್ಯ, ಅರುಣಕುಮಾರ್ ಯರದಿಹಾಳ, ಹೇಮಂತ ನಾಗಲಾಪುರ, ನ್ಯಾಮತ್ ಖಾದ್ರಿ, ರಘುವೀರ ಮುದಗಲ್, ರವಿ ಕಟ್ಟಿಮನಿ, ಮಲ್ಲಪ್ಪ ಮಾಟೂರು, ಸತೀಶ ಭೋವಿ, ನಾಗರಾಜ ತಳವಾರ, ದೇವೇಂದ್ರ ಆಶಿಹಾಳ, ವಿನೋದ್ ಗುಡಿಮನಿ, ಶಂಕರ, ಶಿವು, ವಿಜಯ್, ಲಿಂಗಪ್ಪ ಮಡಿವಾಳ ಇತರರಿದ್ದರು.
ಮುದಗಲ್‌ನಲ್ಲಿ ಛತ್ರಪತಿ ಶಿವಾಜಿ ಬೃಹತ್ ಶೋಭಾಯಾತ್ರೆಗೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿತ್ತು. ಎಸ್ಪಿ ಅರುಣಾಂಗ್ಶು ಗಿರಿ ಭೇಟಿ ನೀಡಿ ಪರಿಶೀಲಿಸಿದರು.