ವಿಠಲಾಪುರದಲ್ಲಿ ಗುರುಪೂರ್ಣಿಮೆ ನಿಮಿತ್ತ ಶ್ರೀ ಸಾಯಿಬಾಬಾ ಮಂದಿರದಲ್ಲಿ ಬಾಬಾ ಮೂರ್ತಿಗೆ ವಿಶೇಷವಾಗಿ ಅಲಂಕರಿಸಿ ಪೂಜಿಸಿರುವುದು.
- ಮೂರ್ತಿಯ
- ಮೆರವಣಿಗೆ
- ಸಮ್ಮುಖದಲ್ಲಿ
ಕನಕಗಿರಿ: ಗುರುಪೂರ್ಣಿಮೆ ನಿಮಿತ್ತ ವಿಠಲಾಪುರದ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಬುಧವಾರ ವಿಶೇಷ ಪೂಜೆ ಹಾಗೂ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆಯಿಂದ ಜರುಗಿದವು.
ಸಾಯಿಬಾಬಾ ಮೂರ್ತಿಯನ್ನು ವಿಶೇಷ ಹೂಗಳಿಂದ ಅಲಂಕರಿಸಿ ಪೂಜಿಸಲಾಯಿತು. ಬೆಳಿಗ್ಗೆ 5.15 ಗಂಟೆಗೆ ಕಾಕಡಾರತಿಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಿದ್ದು, ನಂತರ ಅಭಿಷೇಕ, ಸತ್ಯವ್ರತ, ವಿಜಯ ಸಾಯಿ ಸ್ತೋತ್ರ ಪಠಣ, ನಿತ್ಯ ಪ್ರಾರ್ಥನೆ ಪಠಣ ನಡೆಯಿತು.
ಮಧ್ಯಾಹ್ನ ಆರತಿ ನಂತರ ಸಾಯಿಬಾಬಾರ ಮೂರ್ತಿಯ ಮೆರವಣಿಗೆ ಹಲವು ಭಕ್ತರ ಸಮ್ಮುಖದಲ್ಲಿ ಪಾದಗಟ್ಟೆಯವರೆಗೆ ಸಾಗಿ ಪುನಃ ಮಂದಿರಕ್ಕೆ ಆಗಮಿಸಿತು. ಸಾಯಿ ಸೇವಕ್ ಬಸಾಪಟ್ಟಣದ ಪದ್ಮಜಾ ಅವರಿಂದ ಸತ್ಸಂಗ ಪ್ರಸಂಗಗಳು ಜರುಗಿದವು. ಶ್ರೀ ಅಮ್ಮುಲ ಸಾಂಬಶಿವರಾವು ಅವರು ರಚಿಸಿದ ಶ್ರೀ ಶಿರಡಿ ಸಾಯಿ ಬಾಬಾ ಅವರ ಜೀವನ ಚರಿತ್ರೆಯ ಸತ್ಸಂಗ ಪ್ರಸಂಗಗಳನ್ನು ಪಠಿಸಲಾಯಿತು.
ಕನಕಗಿರಿ, ಚಿಕ್ಕಮಾದಿನಾಳ, ಹಿರೇ ಮಾದಿನಾಳ, ಗಡ್ಡಿ, ಉಡಮಕಲ್, ಆಗೋಲಿ, ಬಂಕಾಪುರ ಸೇರಿ ನಾನಾ ಕಡೆಗಳಿಂದ ಭಕ್ತರು ಗುರುಪೂರ್ಣಿಮೆಯಲ್ಲಿ ಭಾಗವಹಿಸಿದ್ದರು. ನೆರೆದಿದ್ದ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅರ್ಚಕರಾದ ಎಸ್. ವೇಣುಗೋಪಾಲ, ಪ್ರಮುಖರಾದ ಕೃಷ್ಣವೇಣಿ, ಎ. ಹೇಮಂತರಾಜ್, ಜಿ. ಮಸೇನ್‌ರಾವ್, ಟಿ. ರಾಮಕೃಷ್ಣ, ಡಿ.ರಾಮಾರಾವ್, ಕೆ. ಗೀತಾ ಮಾಧವ್, ಬಿ. ಅಂಬರೀಷ್, ವಿಶ್ವನಾಥಸ್ವಾಮಿ ಹಿರೇಮಠ ಉಡುಮಕಲ್ ಇತರರಿದ್ದರು.