ತಾವರಗೇರಾ ಸಮೀಪದ ನಂದಾಪೂರ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆಯುತ್ತಿರುವುದು.
- ನಂದಾಪೂರ ಗ್ರಾಮಸ್ಥರ ಆರೋಪ
- 20 ಲಕ್ಷ ರೂ. ಅನುದಾನ ಮಂಜೂರು
ತಾವರಗೇರಾ: ಸಮೀಪದ ನಂದಾಪೂರ ಗ್ರಾಮದಲ್ಲಿ (ಕೆಕೆಆರ್‌ಡಿಬಿ) ಕಲ್ಯಾಣ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮಂಡಳಿಯಿಂದ ಸಿಸಿ ರಸ್ತೆ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದು, ಕಾಮಗಾರಿಯನ್ನು ಭೂಸೇನಾ ನಿಗಮ ಅಧಿಕಾರಿಗಳಿಗೆ ನೀಡಲಾಗಿದೆ.
ಈಗಾಗಲೇ ನಂದಾಪೂರ ಪ್ರತಿ ಓಣಿಯಲ್ಲಿ ಸಿಸಿ ರಸ್ತೆ ಪೂರ್ಣ ಹಂತಕ್ಕೆ ಬಂದಿದೆ. ಆದರೆ, ಕಾಮಗಾರಿ ಕಳಪೆಯಾಗಿದ್ದು, ಎಸ್ಟಿಮೇಟ್ ಪ್ರಕಾರ ನಡೆದಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಗ್ರಾಮಸ್ಥರಾದ ರಾಮಾಂಜನ, ಬಸನಗೌಡ ಪಾಟೀಲ, ನದಾಫ್, ದೊಡ್ಡಬಸವ ಗೋನಾಳ, ಮಲ್ಲೇಶ ಮೆಣೇಧಾಳ ಒತ್ತಾಯಿಸಿದ್ದಾರೆ.