ಹುಲಿಹೈದರ್‌ನ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಶುಕ್ರವಾರ ತೊಗರಿ ಖರೀದಿ ಕೇಂದ್ರವನ್ನು ಆರಂಭಿಸಲಾಯಿತು. ಗ್ರಾಪಂ ಅಧ್ಯಕ್ಷೆ ಶರಣಮ್ಮ ಕೆಲ್ಲೂರು, ಉಪಾಧ್ಯಕ್ಷ ಜಗದೀಶಪ್ಪ ಗದ್ದಿ, ಸದಸ್ಯ ರಾಜಾಸಾಬ್, ಸಂಘದ ನಿರ್ದೇಶಕರಾದ ಹನುಮಂತಪ್ಪ ಗೋಡಿ, ಮೈಬೂಸಾಬ್, ಮಾರೆಪ್ಪ ಹುಬ್ಬಳ್ಳಿ ಇತರರಿದ್ದರು.
ಕನಕಗಿರಿ: ತಾಲೂಕಿನ ಹುಲಿಹೈದರ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಹೋಬಳಿ ವ್ಯಾಪ್ತಿಯ ರೈತರಿಗಾಗಿ ತೊಗರಿ ಖರೀದಿ ಕೇಂದ್ರವನ್ನು ಶುಕ್ರವಾರ ಆರಂಭಿಸಲಾಯಿತು.
ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಮೇಶ ನಾಯಕ ಮಾತನಾಡಿ, ಸಾವಿರಾರು ರೂ. ಖರ್ಚು ಮಾಡಿ ಬೆಳೆದಿರುವ ತೊಗರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದ ಕಾರಣ ನಷ್ಟ ಅನುಭವಿಸುತ್ತಿದ್ದಾರೆ. ರೈತರಿಗಾಗುವ ನಷ್ಟ ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಕ್ವಿಂಟಾಲ್ 8 ಸಾವಿರ ರೂ.ನಂತೆ ತೊಗರಿ ಖರೀದಿ ಮಾಡಲಾಗುತ್ತಿದೆ. ರೈತರು ಜಮೀನಿನ ಪಹಣಿ, ಇತರ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಬಳಿಕ ಖರೀದಿ ಕೇಂದ್ರಕ್ಕೆ ತೊಗರಿ ಮಾರಾಟ ಮಾಡುವಂತೆ ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಶರಣಮ್ಮ ಕೆಲ್ಲೂರು, ಉಪಾಧ್ಯಕ್ಷ ಜಗದೀಶಪ್ಪ ಗದ್ದಿ, ಸದಸ್ಯ ರಾಜಾಸಾಬ್, ಸಂಘದ ನಿರ್ದೇಶಕರಾದ ಹನುಮಂತಪ್ಪ ಗೋಡಿ, ಮೈಬೂಸಾಬ್, ಮಾರೆಪ್ಪ ಹುಬ್ಬಳ್ಳಿ, ಅಮೀನ್‌ಸಾಬ್ ಪ್ರಮುಖರಾದ ಯಮನೂರಪ್ಪ ಲಾಯದುಣಸಿ, ಕಾರ್ಯದರ್ಶಿ ದೊಡ್ಡಬಸಪ್ಪ ಕನ್ನಾಳ, ಪ್ರಮುಖರಾದ ಹನುಮಂತಪ್ಪ ಗದ್ದಿ, ಅಮರೇಶ್ ಪಟ್ಟಣಶೆಟ್ಟಿ, ಬಸವರಾಜ್ ನಾರಾಯಣಪುರ, ಅಯ್ಯಣ್ಣ ಕನ್ನಾಳ, ಹನುಮಂತಪ್ಪ ಬೇವಿನ ಗಿಡ, ಸಣ್ಣ ಶೇಖರಪ್ಪ ಗದ್ದಿ ಇತರರಿದ್ದರು.