ಭಗವಾನ್ ಬುದ್ಧ ಜಯಂತಿ ಆಚರಣೆ ಅಂಗವಾಗಿ ಶುಕ್ರವಾರ ಕೊಪ್ಪಳದಲ್ಲಿ ಎಡಿಸಿ ಸಿದ್ರಾಮೇಶ್ವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸವಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುವಾರ್, ಸಮುದಾಯದ ಮುಖಂಡರಾದ ಯಲ್ಲಪ್ಪ ಬಳಗಾನೂರ, ಸಿದ್ದರಾಮ ಹೊಸಮನಿ ಇದ್ದರು.  
ಕೊಪ್ಪಳ

ಮಲ್ಲಮ್ಮ-ಬುದ್ಧ ಜಯಂತಿಗೆ ಸಿದ್ಧತೆ ವಾಡಿಕೊಳ್ಳಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸೂಚನೆ
ಕೊಪ್ಪಳ: ಶ್ರೀ ಹೇಮರೆಡ್ಡಿ ಮಲ್ಲಮ್ಮ ಹಾಗೂ ಭಗವಾನ ಬುದ್ಧ ಜಯಂತಿ ಅದ್ದೂರಿಯಾಗಿ ಆಚರಣೆಗೆ ಅಗತ್ಯ ಸಿದ್ಧತೆ ವಾಡಿಕೊಳ್ಳಿ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ತಿಳಿಸಿದರು.
ಹೇಮರೆಡ್ಡಿ ಮಲ್ಲಮ್ಮ-ಬುದ್ಧ ಜಯಂತಿ ಆಚರಣೆ ಕುರಿತು ಜಿಲ್ಲಾಡಳಿತ ಭವನದ ಕೆಸ್ವಾನ್-2ರ ಸಭಾಂಗಣದಲ್ಲಿ ಶುಕ್ರವಾರ ಕರೆದ ಪೂರ್ವಭಾವಿ ಸಭೆಯಲ್ಲಿ ವಾತನಾಡಿದರು. ಮೇ 01ರ ಬೆಳಗ್ಗೆ 9.30ಕ್ಕೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬುದ್ಧ ಜಯಂತಿ ವೇದಿಕೆ ಸವಾರಂಭ ನಡೆಯಲಿದೆ. ಮೇ 10ರ ಬೆಳಗ್ಗೆ 10.30ಕ್ಕೆ ನಗರದ ಕಿನ್ನಾಳ ರಸ್ತೆಯ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಜಯಂತಿ ಆಚರಣೆ ವಾಡಲಾಗುವುದು.
ಕಾರ್ಯಕ್ರಮದಲ್ಲಿ ಪೂಜೆ, ಇಬ್ಬರೂ ಮಹನೀಯರ ಕುರಿತು ವಿಶೇಷ ಉಪನ್ಯಾಸ ಇತರ ಕಾರ್ಯಕ್ರಮಗಳು ನಡೆಯಲಿದೆ. ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸಬೇಕು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಆಚರಣೆಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣ ಕುವಾರ್, ಸವಾಜದ ಮುಖಂಡರಾದ ವಿರುಪಣ್ಣ ನವೋದಯ, ಹನಮರಡ್ಡಿ ಹಂಗನಕಟ್ಟಿ, ಕಾಶೀನಾಥರೆಡ್ಡಿ, ಹನಮರೆಡ್ಡಿ ಇದ್ದರು.