ಯಲಬುರ್ಗಾದ ಎಂಎಚ್‌ಪಿಎಸ್ ಶಾಲೆಯಲ್ಲಿ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಪರಿವರ್ತನಾ ಅವಧಿಯ ತರಬೇತಿ ಕಾರ್ಯಾಗಾರವನ್ನು ತಾಲೂಕಿನ ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶರಣಗೌಡ ಪೊ.ಪಾ. ಉದ್ಘಾಟಿಸಿದರು. ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಸಂಚಾಲಕಿ ಮಂಜುಳಾ, ತಾಲೂಕು ನೌಕರರ ಸಂಘದ ಅಧ್ಯಕ್ಷ ಎಸ್.ಶ್ಯಾಗೋಟಿ, ಪ್ರಮುಖರಾದ ನಾಗರಾಜ ಕುರಿ, ಶಾಂತಪ್ಪ ಜುಮ್ಮನ್ನವರ, ಕಾಂತರಾಜ ಶೆಟ್ಟರ್ ಇತರರಿದ್ದರು.
- ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶರಣಗೌಡ ಪೊಲೀಸ್ ಪಾಟೀಲ್ ಅನಿಸಿಕೆ
- ಪರಿವರ್ತನಾ ಅವಧಿಯ ತರಬೇತಿ ಕಾರ್ಯಾಗಾರ
ಯಲಬುರ್ಗಾ: ಪ್ರಾಥಮಿಕ ಹಂತದಲ್ಲೇ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವಲ್ಲಿ ಸೇತುಬಂಧ ಉಪಕ್ರಮ ಮಹತ್ವದ ಪಾತ್ರ ವಹಿಸಲಿದೆ ಎಂದು ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶರಣಗೌಡ ಪೊಲೀಸ್ ಪಾಟೀಲ್ ಹೇಳಿದರು.
ಪಟ್ಟಣದ ಎಂಎಚ್‌ಪಿಎಸ್ ಶಾಲೆಯಲ್ಲಿ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ ದ್ವಿಭಾಷಾ ಶಾಲೆಗಳ ಸೇತುಬಂಧ ಉಪಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು 1-5ನೇ ತರಗತಿ ಬೋಧಕರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಪರಿವರ್ತನಾ ಅವಧಿಯ ತರಬೇತಿ ಕಾರ್ಯಾಗಾರದಲ್ಲಿ ಮಂಗಳವಾರ ಮಾತನಾಡಿದರು.
ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಧರಣಾರ್ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಹೊಸ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಮಾತೃಭಾಷೆ ಹಾಗೂ ಇತರ ಭಾಷೆಗಳ ಮೂಲಕ ಬೋಧಿಸಿದರೆ ಮಕ್ಕಳ ಕಲಿಕೆ ಸುಲಭವಾಗಲಿದೆ. ಓದು, ಬರಹ ಹಾಗೂ ಗಣಿತದ ಮೂಲಭೂತ ಕೌಶಲ ಬಲಪಡಿಸಲು ದ್ವಿಭಾಷಾ ಬೋಧನೆ ಸಹಕಾರಿ ಎಂದರು.
ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಸಂಚಾಲಕಿ ಮಂಜುಳಾ, ತಾಲೂಕು ನೌಕರರ ಸಂಘದ ಅಧ್ಯಕ್ಷ ಎಸ್.ಶ್ಯಾಗೋಟಿ, ಸಂಪನ್ಮೂಲ ವ್ಯಕ್ತಿ ರಾಜಮಹಮ್ಮದ್ ಬಾಳಿಕಾಯಿ, ಪ್ರಮುಖರಾದ ನಾಗರಾಜ ಕುರಿ, ಶಾಂತಪ್ಪ ಜುಮ್ಮನ್ನವರ, ಕಾಂತರಾಜ ಶೆಟ್ಟರ್, ಬಸನಗೌಡ ರಾಯನಗೌಡ, ರಾಜೇಸಾಬ ಮುಧೋಳ, ಸಿದ್ದಲಿಂಗಪ್ಪ ಕುಂಬಾರ ಇತರರಿದ್ದರು.