ಕನಕಗಿರಿ ತಾಲೂಕಿನ ಸಿರವಾರದಲ್ಲಿ ಸಿಡಿಲು ಬಡಿದು ತೆಂಗಿನ ಮರ ಸುಟ್ಟಿರುವುದು. 
ಕೊಪ್ಪಳ

ಧರೆಗಿಳಿದು ವಾತಾವರಣ ತಂಪಾಗಿಸಿದ ವರುಣ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಕಾರಟಗಿ-ಕನಕಗಿರಿ ತಾಲೂಕಿನಲ್ಲಿ ವರ್ಷಧಾರೆ
ಕಾರಟಗಿ: ಬೇಸಿಗೆ ಆರಂಭದಲ್ಲೇ ಬಿರುಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಸೋಮವಾರ ಸಂಜೆ ಗುಡುಗು-ಸಿಡಿಲಿನೊಂದಿಗೆ ಸುರಿದ ಅಕಾಲಿಕ ಮಳೆ ತಂಪೆರೆಯಿತು.
ಕಳೆದ ಮೂರ‌್ನಾಲ್ಕು ದಿನಗಳಿಂದ ಅತೀವ ಬಿಸಿಲಿನಿಂದ ಬಸವಳಿದಿದ್ದ ಜನತೆಗೆ ಅಕಾಲಿಕ ಮಳೆ ಸಮಾಧಾನ ತಂದಿತಾದರೂ ಗುಡುಗು-ಸಿಡಿಲು ಆರ್ಭಟದಿಂದ ಕೆಲಕಾಲ ಆತಂಕಕ್ಕೀಡಾಗುವಂತಾಯಿತು. ಮಧ್ಯಾಹ್ನ ಕಳೆಯುತ್ತಿದ್ದಂತೆ ವಾತಾವರಣದಲ್ಲಿ ಬಿಸಿಲಿನ ತೀವ್ರತೆ ಇಳಿಮುಖವಾಗುತ್ತ ಸಂಜೆಯಾಗುತ್ತಿದ್ದಂತೆ ಮೋಡ ಕವಿದು ಕೆಲ ಹೊತ್ತಿನಲ್ಲೇ ಗುಡುಗು-ಸಿಡಿಲಿನಿಂದ ಆರಂಭಗೊಂಡ ಮಳೆ ಅರ್ಧಗಂಟೆವರೆಗೆ ಸುರಿದು ವಿರಾಮ ನೀಡಿತು. 

ಸಿಡಿಲು ಬಡಿದು ತೆಂಗಿನ ಮರ ಭಸ್ಮ

ಸಿಡಿಲಿಗೆ ಬಾಲಕ ಬಲಿ

ಯಲಬುರ್ಗಾ: ತಾಲೂಕಿನ ಎನ್.ಜರಕುಂಟಿ ಗ್ರಾಮದಲ್ಲಿ ಸೋಮವಾರ ಸಿಡಿಲು ಬಡಿದು ಬಾಲಕ ಮಂಜುನಾಥ ಮುದೇಗೌಡ ಗೌಡ್ರ (14) ಮೃತಪಟ್ಟಿದ್ದಾನೆ. ಗ್ರಾಮದ ಹೊರ ವಲಯದಲ್ಲಿ ಕುರಿ ಮೇಯಿಸಿಕೊಂಡು ಮನೆಗೆ ಬರುವಾಗ ಸಿಡಿಲು ಬಡಿದಿದೆ. ಈತ ತಾಲೂಕಿನ ಹಗೆದಾಳ ಗ್ರಾಮ ನಿವಾಸಿಯಾಗಿದ್ದು, ತಾಯಿ ತವರು ಮನೆಯಾದ ಎನ್.ಜರಕುಂಟಿ ಗ್ರಾಮದಲ್ಲಿ ಕುರಿ ಸಾಕಣೆ ಮಾಡಿ ಉಪ ಜೀವನ ಸಾಗಿಸುತ್ತಿದ್ದರು. ಬೇವೂರು ಪಿಎಸ್‌ಐ ಎಸ್.ಪಿ.ನಾಯ್ಕ, ತಹಸೀಲ್ದಾರ್ ಪ್ರಶಾಂತ ಎಂ.ನಾಶಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಪರಿಹಾರ ಭರಿಸುವುದಾಗಿ ತಿಳಿಸಿದರು.