ಕೊಪ್ಪಳ : ಬೋವಿ ಮತ್ತು ಬೋಯಿ ಸಮುದಾಯಗಳನ್ನು ಒಂದೇ ಎಸ್ಸಿ ವರ್ಗವೆಂದು ವಿ.ಎಸ್ ಉಗ್ರಪ್ಪನವರು ಹೇಳುತ್ತಿರುವುದು ಸರಿಯಲ್ಲ ಎಂದು ಬೋವಿ ಸಮಾಜದ ಅಧ್ಯಕ್ಷ ಸುಂಕಪ್ಪ ಮಾಲಗಿತ್ತಿ ಹೇಳಿದರು.
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ವಿ.ಎಸ್. ಉಗ್ರಪ್ಪನವರು ಮೂರು ತಿಂಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಬೋವಿ ಮತ್ತು ಬೋಯಿ ಎರಡೂ ಎಸ್ಸಿ ವರ್ಗಕ್ಕೆ ಸೇರಿವೆ ಎಂದು ಹೇಳುತ್ತರುವುದು ಸರಿಯಲ್ಲ. ಬೋಯಿ ಸಮುದಾಯವು ಅಂಬಿಗರ ಸಮುದಾಯಕ್ಕೆ ಸೇರಿದ್ದು, ಅದನ್ನು ಬೋವಿ ಸಮುದಾಯದೊಂದಿಗೆ ಒಗ್ಗೂಡಿಸುವುದು ಸರಿಯಲ್ಲ. ದಾಖಲೆಗಳಿದ್ದರೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ, ಅದು ಬಿಟ್ಟು ಜನರನ್ನು ತಪ್ಪುದಾರಿಗೆಳೆಯುವುದು ತಪು$್ಪ ಎಂದರು.
ಬೋಯಿ ಸಮುದಾಯ ಎಸ್ಸಿಗೆ ಸೇರಿಸಬೇಕೆಂದು ಅವರು ಹೇಳುತ್ತಿದ್ದಾರೆ. ಈ ಬಗ್ಗೆ ಯಾವುದೇ ದಾಖಲೆಗಳಿದ್ದರೆ ಸಾರ್ವಜನಿಕರಿಗೆ ತೋರಿಸಲಿ. ಉಗ್ರಪ್ಪನವರು ಕಾನೂನು ಜ್ಞಾನ ಮತ್ತು ರಾಜಕೀಯ ಅನುಭವ ಹೊಂದಿದ್ದರೂ, ಸೂಕ್ತ ದಾಖಲೆಗಳಿಲ್ಲದೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಬೋಯಿ ಸಮುದಾಯ ಎಸ್ಸಿಗೆ ಸೇರಿದೆ ಎಂದು ಹೇಳುವುದು ಜನರಲ್ಲಿ ಗೊಂದಲ ಉಂಟುಮಾಡುತ್ತಿದೆ ಎಂದು ಆರೋಪಿಸಿದರು.
ಬೋಯಿ ಸಮುದಾಯವು ಪ್ರಸ್ತುತ ಇರುವ ವರ್ಗ 1ರಲ್ಲೇ ಮುಂದುವರಿಯಬೇಕು, ಅದನ್ನು ಬೋವಿ ಎಸ್ಸಿ ಸಮುದಾಯಕ್ಕೆ ಸೇರಿಸುವುದು ನ್ಯಾಯಸಮ್ಮತವಲ್ಲ. ನಿಜವಾದ ಬೋವಿ ಸಮುದಾಯದವರಿಗೆ ಮಾತ್ರ ಎಸ್ಸಿ ಮೀಸಲಾತಿ ಸಿಗಬೇಕು. ಬೋಯಿ ಸಮುದಾಯವನ್ನು ಅದರಲ್ಲಿ ಸೇರಿಸಲು ಯಾವುದೇ ಪ್ರಯತ್ನಕ್ಕೆ ನಮ್ಮ ವಿರೋಧವಿದೆ ಎಂದರು.
ಬೋವಿ ಸಮುದಾಯದ ಪ್ರಮುಖರಾದ ಹುಡುಚಪ್ಪ ಬೋವಿ, ನಾಗರಾಜ ಬೋವಿ, ಹನುಮಂತ ಬೋವಿ ಇದ್ದರು.