ಕುಷ್ಟಗಿ ತಾಲೂಕಿನ ಮೆಣೇಧಾಳ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. 
ಕೊಪ್ಪಳ

ರಕ್ತ ಸಂಚಾರ ಸುಗಮ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ತಾಪಂ ಸಹಾಯಕ ನಿರ್ದೇಶಕ ವಿ.ಎಚ್.ನಿಂಗನಗೌಡ ಹೇಳಿಕೆ
  • ಅಂತಾರಾಷ್ಟ್ರೀಯ ಯೋಗ ದಿನ
ಕುಷ್ಟಗಿ: ಆಧುನಿಕ ಆಹಾರ ಪದ್ಧತಿ ಮತ್ತು ಒತ್ತಡದ ಜೀವನ ಶೈಲಿಯಿಂದ ಅನಾರೋಗ್ಯ ಮನುಷ್ಯರನ್ನು ಕಾಡುತ್ತಿದೆ. ಉತ್ತಮ ಆರೋಗ್ಯಕ್ಕಾಗಿ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ವಿ.ಎಚ್.ನಿಂಗನಗೌಡ ಹೇಳಿದರು.
ತಾಲೂಕಿನ ಮೇಣೆಧಾಳ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಪೂರ್ವಜರು ಯೋಗವನ್ನು ಕೊಡುಗೆಯಾಗಿ ನೀಡಿದ್ದಾರೆ. ಪ್ರತಿ ಅಂಗಕ್ಕೆ ವ್ಯಾಯಮ ಆಗುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ದೈಹಿಕ ಸದೃಢತೆ ಮತ್ತು ಮಾನಸಿಕ ನೆಮ್ಮದಿ ಲಭಿಸುತ್ತದೆ. ಇಡೀ ವಿಶ್ವವೇ ಯೋಗಾಭ್ಯಸಕ್ಕೆ ವಿಶೇಷ ಆಧ್ಯತೆ ನೀಡಿದೆ ಎಂದರು.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ರವಿಗೌಡರ್, ತಾಪಂ ಐಇಸಿ ಸಂಯೋಜಕ ಜಿ.ಚಂದ್ರಶೇಖರ್, ಮುರಾರ್ಜಿ ದೇಸಾಯಿ ಶಾಲೆಯ ದೈಹಿಕಶಿಕ್ಞಣ ಶಿಕ್ಷಕ ಸಂಗಪ್ಪ, ಆರೋಗ್ಯ ಇಲಾಖೆ ಸಿಬ್ಬಂದಿ ರಮೇಶ್, ಅನ್ವರ್, ಗ್ರಾಪಂ ಸಿಬ್ಬಂದಿ ಮಂಜುನಾಥ್, ಶೇಖರಪ್ಪ, ಮೀನಾಕ್ಷ್ಮೀ, ಹನುಮಂತಪ್ಪ, ಬಸವರಾಜ, ಶ್ರೀನಿವಾಸ್ ರಾವ್, ಅಂಜುಂ ಬೇಗ್, ಕುಂಟೆಪ್ಪ ಇತರರಿದ್ದರು.