ಮಾಟಲದಿನ್ನಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜನಸಂದರ್ಶನ ಕಾರ್ಯಕ್ರಮದಲ್ಲಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿದರು. ತಹಸೀಲ್ದಾರ್ ಪ್ರಕಾಶ ನಾಶಿ, ತಾಪಂ ಇಒಗಳಾದ ನೀಲಗಂಗಾ ಬಬಲಾದ, ಬೆಟದೇಶ ಮಾಳೇಕೊಪ್ಪ, ಲೋಕೋಪಯೋಗಿ ಇಲಾಖೆ ಎಇಇ ಮಲ್ಲಿಕಾರ್ಜುನ, ಪ್ರಮುಖರಾದ ಅನಿಲ್ ಪಾಟಿಲ್, ಪ್ರಮೋದ ಇತರರಿದ್ದರು.
- ಸಚಿವ ಬಸವರಾಜ ರಾಯರಡ್ಡಿ ಟೀಕೆ
- ಯಲಬುರ್ಗಾ ಮಾಟಲದಿನ್ನಿ ಜನಸಂದರ್ಶನ
ಯಲಬುರ್ಗಾ: ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಬಿಜೆಪಿಯವರು ಬಡವರ ಏಳಿಗೆ ಸಹಿಸದೆ ಕೆಲವರು ಕುಂಕಮ ಹಚ್ಚಿಕೊಂಡು, ಕೇಸರಿ ಶಾಲು ಹಾಕಿಕೊಂಡು ಜನರ ಭಾವನೆಗಳ ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವುದು ಸಮಾಜದ ಅಭಿವೃದ್ಧಿಗೆ ಮಾರಕ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಟೀಕಿಸಿದರು.
ಮಾಟಲದಿನ್ನಿ ಗ್ರಾಮದಲ್ಲಿ ಜಿಲ್ಲಾಡಳಿತ, ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ಜನಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶರಣ ತತ್ವ ಪಾಲಿಸಬೇಕು, ಮಾನವ ಧರ್ಮ ಒಂದೇ. ಎಲ್ಲ ಜಾತಿ, ಜನಾಂಗವನ್ನು ಪ್ರೀತಿಸುವೆ ಮತ್ತು ಗೌರವಿಸುವೆ. ರಾಜ್ಯದಲ್ಲಿ 181 ತಾಲೂಕುಗಳಲ್ಲಿ ಬರವಿದೆ. ಮಲೆನಾಡಿನಲ್ಲೂ ಸಮರ್ಪಕವಾಗಿ ಮಳೆಯಾಗಿಲ್ಲ. ಮೊದಲನೇ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ತಾಲೂಕಿಗೆ ಮುಂದಿನ 15 ದಿನಗಳಲ್ಲಿ ಕಂದಾಯ ಸಚಿವ, ಉಪಮುಖ್ಯಮಂತ್ರಿ ಪರಮೇಶ್ವರ ಅವರನ್ನು ಕರೆತರಲಾಗುವುದು ಎಂದು ತಿಳಿಸಿದರು.
ಚುನಾಯಿತ ಪ್ರತಿನಿಧಿಗಳಿಗೆ ನೀರಾವರಿ, ಕಾನೂನು ಜ್ಞಾನ ಇರಬೇಕು. ಡ್ಯಾಂ ತುಂಬಿದರೂ ನೀರು ಬಳಸಿಕೊಳ್ಳಲು ಆಗುವುದಿಲ್ಲ. ಹಂಚಿಕೆ ಪಾಲು ಇರುತ್ತದೆ. ಕ್ಷೇತ್ರದ ಕೆರೆ ತುಂಬಿಸುವ ಯೋಜನೆಯ ಶಂಕುಸ್ಥಾಪನೆಗೆ ಸಿಎಂ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕರೆತರಲಾಗುವುದು. ನಾನು ಸಚಿವನಾಗಿದ್ದರಿಂದ ಫೋನ್ ಸ್ವೀಕರಿಸಲು ಆಗುವುದಿಲ್ಲ, ಸಿಕ್ಕಾಪಟ್ಟೆ ಕೆಲಸಗಳು ಇರುತ್ತವೆ. ಆದ್ದರಿಂದ ಸಹಕರಿಸಿ ಎಂದು ಜನರಲ್ಲಿ ಕೋರಿದರು.
ತಹಸೀಲ್ದಾರ್ ಪ್ರಕಾಶ ನಾಶಿ, ತಾಪಂ ಇಒಗಳಾದ ನೀಲಗಂಗಾ ಬಬಲಾದ, ಬೆಟದೇಶ ಮಾಳೇಕೊಪ್ಪ, ಲೋಕೋಪಯೋಗಿ ಇಲಾಖೆ ಎಇಇ ಮಲ್ಲಿಕಾರ್ಜುನ, ಪ್ರಮುಖರಾದ ಅನಿಲ್ ಪಾಟೀಲ್, ಪ್ರಮೋದ, ರಾಘವೇಂದ್ರಾಚಾರ್ಯ ಜೋಶಿ, ಮಹೇಶ ಹಳ್ಳಿ, ಶರಣಪ್ಪ ಗಾಂಜಿ, ಶಿವನಗೌಡ ದಾನರೆಡ್ಡಿ, ಮಲ್ಲು ಜಕ್ಕಲಿ, ನಾಗರಾಜ ನವಲಹಳ್ಳಿ, ಹುಲಗಪ್ಪ ಬಂಡಿವಡ್ಡರ, ಈಶ್ವರ ಅಟಮಾಳಗಿ ಇತರರಿದ್ದರು.