ಶಿವರಾಜ ತಂಗಡಗಿ  
ಕೊಪ್ಪಳ

ರೈತರ ಹಾದಿ ತಪ್ಪಿಸುತ್ತಿದೆ ಬಿಜೆಪಿ

ಪ್ರಮುಖ ಮುಖ್ಯಾಂಶಗಳು

  • ಹೋರಾಟ
  • ಬಿಜೆಪಿ
  • ನಾಯಕರ
ಕಾರಟಗಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಎರಡನೇ ಬೆಳೆಗೆ ನೀರು ಹರಿಸದಂತೆ ಸಿಡಬ್ಲುಸಿ ಸಮಿತಿ ನಿರ್ಧಾರ ಕೈಗೊಂಡಿದೆ. ಬಿಜೆಪಿ ನಾಯಕರಿಗೆ ನಿಜವಾಗಿ ರೈತರ ಮೇಲೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲಿ. ಅದನ್ನು ಬಿಟ್ಟು ಇಲ್ಲಿ ಹೋರಾಟ ಮಾಡುತ್ತಿರುವುದು ಬಿಜೆಪಿ ನಾಯಕರ ನಡೆ ನಾಚಿಕೆಗೇಡಿತನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದರು.
ಪಟ್ಟಣದ ಗೃಹಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಡಬ್ಲುೃಸಿ ಸಮಿತಿ ಕೇವಲ 80 ಟಿಎಂಸಿ ನೀರನ್ನು ಮಾತ್ರ ಸಂಗ್ರಹಣೆ ಮಾಡುವಂತೆ ಮತ್ತು ಒಂದೇ ಬೆಳೆಗೆ ನೀರು ಹರಿಸುವಂತೆ ತೀರ್ಮಾನ ಕೈಗೊಂಡಿದೆ. ಅದರಂತೆ ಐಸಿಸಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಗದೆ ರೈತರನ್ನು ಹಾದಿ ತಪ್ಪಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
ರೈತರಿಗೆ ಎರಡನೇ ಬೆಳೆಗೆ ನೀರು ನೀಡದಿದ್ದರೆ ಸರ್ಕಾರ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡುವಂತೆ ಬಿಜೆಪಿ ಮುಖಂಡ ಬಿ. ಶ್ರೀರಾಮಲು ಅವರು ಒತ್ತಾಯಿಸಿದ್ದಾರೆ. ಾನೇ ಶ್ರೀರಾಮುಲು ಅವರಿಗೆ ವಿನಂತಿಸಿಕೊಳ್ಳುತ್ತೇನೆ. ಬಿಜೆಪಿಯಲ್ಲಿ ನೀವು ತುಂಬಾ ಪವರ್ ಫುಲ್ ಲೀಡರ್ ಆಗಿದ್ದೀರಿ. ಇನ್ನು ಕೇಂದ್ರ ಸರ್ಕಾರದ ವ್ಯಾಪ್ತಿಯ ಸಿಡಬ್ಲುೃಸಿ ಸಮಿತಿ ರೈತರಿಗೆ ಎರಡನೇ ಬೆಳೆಗೆ ನೀರು ಹರಿಸದಿರಲು ತೀರ್ಮಾನಿಸಿದೆ. ಹೀಗಾಗಿ ರಾಮುಲು ಅಣ್ಣ ಮತ್ತು ಬಸವರಾಜ ದಢೇಸುಗೂರು ಅಣ್ಣನವರು ಇಬ್ಬರು ಸೇರಿ ರೈತರಿಗೆ ಎಕರೆಗೆ 25 ಸಾವಿರ ರೂ. ಅಲ್ಲ  50 ಸಾವಿರ ರೂ. ಪರಿಹಾರ ಕೊಡಿಸಲಿ. ಅವರನ್ನು ನಾನು ಅಭಿನಂದಿಸುವೆ ಎಂದು ಲೇವಡಿ ಮಾಡಿದರು.
"

ಕ್ಷೇತ್ರದಲ್ಲಿ ಇಸ್ಪೀಟ್ ಸಂಪೂರ್ಣ ಸ್ಥಗಿತಗೊಂಡಿದ್ದು, ಇಬ್ಬರು ಮೂರು ಇಸ್ಪೀಟ್ ಗಿರಾಕಿಗಳಿದ್ದಾರೆ. ಅವರಿಗೆ ಮಾಡಲು ಬೇರೆ ಕೆಲಸವಿಲ್ಲ. ಆದ್ದರಿಂದ ನೀರಿನ ನೆಪದ ರೈತರನ್ನು ದಾರಿ ತಪಿಸುವ ಹೋರಾಟ ನಡೆಸಿದ್ದಾರೆೆ. ಯಾವೊಬ್ಬ ನಿಜವಾದ ರೈತರು ಯಾರೂ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ. ಎರಡನೇ ಬೆಳೆಗೆ ನೀರಿಗಿಂತ ಜಲಾಶಯದ ಸುರಕ್ಷತೆ ಮುಖ್ಯವಾಗಿದೆ. ಜಲಾಶಯ ಸುರಕ್ಷಿತವಾಗಿದ್ದರೆ ನಾವು ಸಾವಿರಾರು ಬೆಳೆ ಬೆಳೆಯಬಹುದು. ಜಲಾಶಯದ ಬಗ್ಗೆ ಎಚ್ಚರಿಕೆವಹಿಸುವಂತೆ ನೂರಾರು ರೈತರು ನನಗೆ ಕರೆಮಾಡಿ ಮನವಿ ಮಾಡಿದ್ದಾರೆ.