ಗಂಗಾವತಿ ಬಿಜೆಪಿ ಕಚೇರಿಯಲ್ಲಿ ವಿವಿಧ ಮೋರ್ಚಾದಿಂದ ಪಕ್ಷ ಸಂಸ್ಥಾಪನಾ ದಿನ ನಿಮಿತ್ತ ಪಕ್ಷದ ಧ್ವಜಾರೋಹಣ ಸೋಮವಾರ ನೆರವೇರಿಸಲಾಯಿತು. ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ಗಿರೇಗೌಡ ಇತರರಿದ್ದರು.
- ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಹೇಳಿಕೆ
ಗಂಗಾವತಿ: ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳವಾಗಿದ್ದು, ಅವರ ಶ್ರಮದಿಂದಲೇ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ವಿವಿಧ ಮೋರ್ಚಾದಿಂದ ಸೋಮವಾರ ಹಮ್ಮಿಕೊಂಡಿದ್ದ ಪಕ್ಷ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿ ಆಡಳಿತವನ್ನು ಜಗತ್ತೇ ಮೆಚ್ಚಿಕೊಂಡಿದ್ದು, ಎಲ್ಲ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ ಎಂದರು.
ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ಗಿರೇಗೌಡ, ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ್ ಹಿರೂರ್, ಗ್ರಾಮೀಣ ಮಂಡಳ ಅಧ್ಯಕ್ಷ ಡಿ.ಕೆ.ಆಗೋಲಿ, ವಿವಿಧ ಮೋರ್ಚಾ ಪದಾಧಿಕಾರಿಗಳಾದ ಯಮನೂರಚೌಡ್ಕಿ, ರಮೇಶ ಹೊಸ್ಮಲಿ, ಹನುಮೇಶ ಇಂದ್ರಗಿ, ಹನುಮಂತಪ್ಪ ನಾಯಕ, ಮಹಾಂತೇಶ ಸ್ವಾಮಿ, ಮೌಲಸಾಬ್, ಭಾರತಿ ಆಗಲೂರು, ಮಂಜು ಕಟ್ಟಿಮನಿ, ಸಂಗಮೇಶ ಅಯೋಧ್ಯಾ, ಪ್ರಸಾದ ಹಲ್ಟಿ ಇತರರಿದ್ದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ನಿವಾಸದ ಮೇಲೆ ಪಕ್ಷದ ಧ್ವಜಾರೋಹಣ ನೆರವೇರಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ಪಕ್ಷದ ಸಂಸ್ಥಾಪನಾ ದಿನ ಆಚರಿಸಿದರು.
ಪಕ್ಷ ಸಂಘಟನೆ, ಸಿದ್ಧಾಂತ ಮತ್ತು ಕಾರ್ಯಕರ್ತರ ಶ್ರಮ ಕುರಿತು ಮಾಜಿ ಶಾಸಕ ಪರಣ್ಣಮುನವಳ್ಳಿ ಮಾತನಾಡಿದರು. ಕಾರ್ಯಕರ್ತರಾದ ಕಾಶೀನಾಥ ಚಿತ್ರಗಾರ, ಅಕ್ಕಿ ಚಂದ್ರಶೇಖರ್, ಸಂಗಯ್ಯಸ್ವಾಮಿ ಸಂಶಿಮಠ, ಟಿ.ಆರ್. ರಾಯಭಾಗಿ, ಚನ್ನಬಸವಸ್ವಾಮಿ ಕಲ್ಮಠ, ಮೋಹನ್‌ಸಿಂಗ್, ಪರಶುರಾಮ್ ನಾಯಕ, ಸಂಗಮೇಶ ಪತ್ತಾರ್, ಈರಣ್ಣ ನಾಗಲೀಕರ್ ಇತರರಿದ್ದರು.