ಕಂದಕೂರು ಗ್ರಾಮದಲ್ಲಿ ರಸ್ತೆ ವಿಸ್ತರಣೆ ಹಾಗೂ ಡಾಂಬರೀಕರಣದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ್ ಚಾಲನೆ ನೀಡಿದರು. ಜಿಪಂ ಮಾಜಿ ಸದಸ್ಯ ಕೆ.ಮಹೇಶ, ಲೋಕೋಪಯೋಗಿ ಇಲಾಖೆ ಎಇಇ ಸುಧಾಕರ್ ಕಾತರಕಿ, ಗುತ್ತಿಗೆದಾರ್ ಡಿ.ಎಸ್.ಕಂದಕೂರು, ಮುಖಂಡ ಕಲ್ಲೇಶ ತಾಳದ್ ಇನ್ನಿತರರಿದ್ದರು. 
ಕೊಪ್ಪಳ

ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ

ಪ್ರಮುಖ ಮುಖ್ಯಾಂಶಗಳು

  • ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿಕೆ
ಕುಷ್ಟಗಿ: ಗ್ರಾಮೀಣ ಭಾಗದ ರಸ್ತೆಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ತಾಲೂಕಿನ ಕಂದಕೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಲೋಕೋಪಯೋಗಿ ಇಲಾಖೆಯಿಂದ ಕಂದಕೂರ-ಕುಷ್ಟಗಿವರಗೆ 3.5 ಕೋಟಿ ರೂ.ವೆಚ್ಚದಲ್ಲಿ ರಸ್ತೆ ವಿಸ್ತರಣೆ ಹಾಗೂ ಡಾಂಬರೀಕರಣದ ಭೂಮಿ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು.
ಮತ ಕ್ಷೇತ್ರದಲ್ಲಿ ರಸ್ತೆ ಸುಧಾರಣೆಗೆ ಲೋಕೋಪಯೋಗಿ ಇಲಾಖೆಯಿಂದ ಡಾಂಬರ್ ರಸ್ತೆ ಕೈಗೊಳ್ಳಲಾಗಿದೆ. ರಸ್ತೆ ನಿರ್ಮಾಣಕ್ಕೆ ಬಹುದಿನದಿಂದ ಬೇಡಿಕೆ ಇತ್ತು. ಇದೀಗ ಈಡೇರಿಸಲಾಗಿದೆ. ಸಾರ್ವಜನಿಕರು ಲಘುವಾಗಿ ತಾಲೂಕು ಕೇಂದ್ರ ತಲುಪಲು ಸುಗಮ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಪ್ರಮುಖರಾದ ಕಂದಕೂರಪ್ಪ ವಾಲ್ಮೀಕಿ, ಶರಣಪ್ಪ ಬಿಜಕಲ್, ವೀರಯ್ಯ ಮಠಪತಿ, ಭೀಮನಗೌಡ, ಸಲೀಂಸಾಬ್, ಬಸವರಾಜ ಕಾಮನೂರ, ಚಂದ್ರಹಾಸ ಭಾವಿಕಟ್ಟಿ, ಶರಣಪ್ಪ ಗೋಪಾಳೆ, ಆಂಜನೇಯ ಹಾದಿಮನಿ, ಮಾರುತಿ ಹಲಗಿ ಇತರರು ಇದ್ದರು.
2.37 ಕೋಟಿ ರೂ. ಕಾಮಗಾರಿ: ರಸ್ತೆ ಕಾಮಗಾರಿ ಗುಣಮಟ್ಟ ನಿರ್ವಹಿಸುವ ಮೂಲಕ ಕಾಲಮಿತಿ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಇಲ್ಲಿನ ಬಸ್ ನಿಲ್ದಾಣದ ಬನ್ನಿಕಟ್ಟಿಯ ಹತ್ತಿರ ಕುಷ್ಟಗಿ-ಕ್ಯಾದಗುಪ್ಪಿ ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಂಗಳವಾರ ಮಾತನಾಡಿದರು.
2025-26 ನೇ ಸಾಲಿನ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ದಿ ಕಾಮಗಾರಿ ಯೋಜನೆಯ ಅಂದಾಜು ಮೊತ್ತ 2.37 ಕೋಟಿ ರೂ. ಕಾಮಗಾರಿ ಆರಂಭಿಸಲಾಗುತ್ತಿದ್ದು, ಈ ಭಾಗದ ಸಾರ್ವಜನಿಕರಿಗೆ ರಸ್ತೆ ಸುಗಮವಾಗಿ ಸಂಚರಿಸಲು ಅನುಕೂಲವಾಗಲಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಕಲ್ಲೇಶ ತಾಳದ್, ಜಿಪಂ ಮಾಜಿ ಸದಸ್ಯ ಕೆ.ಮಹೇಶ, ಲೋಕಪಯೋಗಿ ಇಲಾಖೆ ಎಇಇ ಸುಧಾಕರ್ ಕಾತರಕಿ, ಮುಖಂಡರಾದ ನರಸಿಂಹ ಕಾರಟಗಿ, ಪರಶುರಾಮ ನಾಗರಾಳ ಇತರರಿದ್ದರು.