ಅಂಬಾಭವಾನಿ ದೇವಾಲಯದಲ್ಲಿ ಹಮ್ಮಿಕೊಂಡ ಭಂಡಾರ ಪೂಜೆಗೆ ಆಗಮಿಸುವಂತೆ ಒತ್ತಾಯಿಸಿ ಕುಷ್ಟಗಿಯಲ್ಲಿ ಗುರುವಾರ ಭಾಗ್ಯನಗರ ಎಸ್ಎಸ್ಕೆ ಸಮುದಾಯ ಮುಖಂಡರು ಆಹ್ವಾನಿಸಿದರು. ಪ್ರಮುಖರಾದ ರವೀಂದ್ರ ಸಾ ಬಾಕಳೆ, ದೇವಸ್ಥಾನ ಸಮಿತಿ ಅಧ್ಯಕ್ಷ ವೆಂಕಟೇಶ ಕಾಟವಾ,ಉಪಾಧ್ಯಕ್ಷ ರಾಜಣಸಾ ಕಾಟವಾ,ಟ್ರಸ್ಟಿಗಳಾದ ಡಾ.ರವಿಕುಮಾರ್ ದಾನಿ, ವಿಠ್ಠಲ ದಲಬಂಜನ ಇದ್ದರು.
- ಎಸ್ಎಸ್ಕೆ ಸಮುದಾಯದಿಂದ ಆಯೋಜನೆ
ಕೊಪ್ಪಳ: ಭಾಗ್ಯನಗರದ ಶ್ರೀ ಅಂಬಾಭವಾನಿ ದೇವಾಲಯದ ಭಂಡಾರ ಪೂಜೆಗೆ ಆಗಮಿಸುವಂತೆ ಕುಷ್ಟಗಿ ಸಹಸ್ರಾರ್ಜುನ ಸೋಮವಂಶ ಕ್ಷತ್ರೀಯ ಸಮುದಾಯದವರಿಗೆ ಗುರುವಾರ ಆಮಂತ್ರಣ ನೀಡಲಾಯಿತು.
ಕೊಪ್ಪಳ ಸಮುದಾಯ ಮುಖಂಡ ಪರಶುರಾಮ ಪವಾರ್ ಮಾತನಾಡಿ, ಇದೊಂದು ಮಹತ್ವದ ಧಾರ್ಮಿಕ ಕಾರ್ಯಕ್ರಮ. ಭಂಡಾರ ಪೂಜೆ ಮಾಡುವುದರಿಂದ ರಾಜ್ಯದಲ್ಲಿ ಮಳೆ&ಬೆಳೆ ಉತ್ತಮವಾಗಿ ಬರಲಿದೆ. ಬರಗಾಲ ಹೋಗಲಿ, ನಾಡಲ್ಲಿ ಸುಖ-ಸಮೃದ್ಧಿ, ಶಾಂತಿ ನೆಲೆಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು. ಮಹಾ ಪ್ರಸಾದ ವ್ಯವಸ್ಥೆ ಹಮ್ಮಿಕೊಂಡಿದ್ದು, ಎಲ್ಲರೂ ಆಗಮಿಸುವಂತೆ ಮನವಿ ಮಾಡಿದರು.
ಕುಷ್ಟಗಿ ಸಮುದಾಯ ಮುಖಂಡ ರವೀಂದ್ರ ಸಾ ಬಾಕಳೆ ಮಾತನಾಡಿ, ದೇವಿಯ ಕೃಪೆ ಆದಲ್ಲಿ ಬರಗಾಲ ನೀಗಲಿದೆ. ಇಂಥಧಾರ್ಮಿಕ ಕಾರ್ಯಕ್ರಮ, ವಿಶೇಷ ಪೂಜೆ, ಪ್ರಸಾದ ನಿರಂತರ ನಡೆಯಲಿ ಎಂದರು. ದೇವಸ್ಥಾನ ಸಮಿತಿ ಅಧ್ಯಕ್ಷ ವೆಂಕಟೇಶ ಕಾಟವಾ,ಉಪಾಧ್ಯಕ್ಷ ರಾಜಣಸಾ ಕಾಟವಾ,ಟ್ರಸ್ಟಿಗಳಾದ ಡಾ.ರವಿಕುಮಾರ್ ದಾನಿ, ವಿಠ್ಠಲ ದಲಬಂಜನ, ಆನಂದ ರಾಯಬಾಗಿ, ಶ್ರೀನಿವಾಸ ಬಾಕಳೆ, ಕೇಶವ ಕಾಟವಾ ಇತರರಿದ್ದರು.
ಧಾರ್ಮಿಕ ಕಾರ್ಯಕ್ರಮ
ಭಾಗ್ಯನಗರದ ಅಂಬಾಭವಾನಿ ದೇವಾಲಯದಲ್ಲಿ ಜು.31ರಂದು ಮಧ್ಯಾಹ್ನ 12 ಗಂಟೆಗೆ ದೇವಿಗೆ ಮಹಾ ಮಂಗಳಾರತಿ ನಡೆಯಲಿದೆ. ಬಳಿಕ ಮುತೆದೆಯರಿಗೆ ಉಡಿ ತುಂಬಲಾಗುವುದು. ಬಳಿಕ ಮಹಾ ಪ್ರಸಾದ ಇರಲಿದೆ. ಎಸ್ಎಸ್ಕೆ ಸಮುದಾಯ ವಿವಿಧ ಸಂಟನೆಗಳು, ವಿವಿಧ ಗಣ್ಯರು, ಪ್ರಮುಖರು ಭಾಗಿಯಾಗಲಿದ್ದಾರೆ.