ಭೈರಾಪುರದಲ್ಲಿ ದುರ್ಗಾದೇವಿ, ತಾಯಮ್ಮದೇವಿ ಜಾತ್ರೆ ಅಂಗವಾಗಿ ಮೆರವಣಿಗೆ ನಡೆಯಿತು. ಪ್ರಮುಖರಾದ ಮೈಲಾರಪ್ಪ, ವೆಂಕಟೇಶ, ಗಂಗಪ್ಪ, ಬಸವರಡ್ಡಿ, ನಿಂಗಪ್ಪ, ವೀರಯ್ಯ, ಪರಶುರಾಮ ಇತರರಿದ್ದರು.
ಅಳವಂಡಿ: ಸಮೀಪದ ಭೈರಾಪುರ ಗ್ರಾಮದ ಆರಾಧ್ಯ ದೇವತೆಯರಾದ ಶ್ರೀ ದುರ್ಗಾದೇವಿ ಹಾಗೂ ಶ್ರೀ ತಾಯಮ್ಮದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ದೇವಿಯರ ಮೆರವಣಿಗೆ ಹಾಗೂ ಗಂಗಾಪೂಜೆ ಬುಧವಾರ ಅದ್ದೂರಿಯಿಂದ ನಡೆಯಿತು.
ಬೆಳಗ್ಗೆ ದುರ್ಗಾದೇವಿ, ತಾಯಮ್ಮದೇವಿಗೆ ವಿಶೇಷ ಪೂಜೆ ಪುನಸ್ಕಾರ, ಅಭಿಷೇಕ ಸಹಸ್ರ ಬಿಲ್ವಾರ್ಚನೆ ಹಾಗೂ ಹೂಗಳಿಂದ ಅಲಂಕಾರ ಸೇರಿದಂತೆ ಮುಂತಾದ ಕಾರ್ಯಕ್ರಮಗಳು ನಡೆದವು. ನಂತರ ಮಹಿಳೆಯರ ಕಳಸ, ಬಾಜಾ ಭಜಂತ್ರಿ, ನಂದಿಕೋಲು ಹಾಗೂ ಮೋರನಾಳ, ಬೈರಾಪುರ, ಇತರ ಗ್ರಾಮಗಳ ಡೊಳ್ಳು ಹಾಗೂ ಇತರ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಂಗಾಸ್ಥಳಕ್ಕೆ ಪೂಜೆಗೆ ತೆರಳಲಾಯಿತು. ಗಂಗಾಪೂಜೆ ನಂತರ ಗ್ರಾಮದ ಭಕ್ತರು ದೀರ್ಘ ದಂಡ ನಮಸ್ಕಾರ ಹಾಕಿ ಹರಿಕೆ ಸಲ್ಲಿಸಿದರು. ದೇವಿಯರಿಗೆ ಉಡಿ ತುಂಬುವ ಕಾರ್ಯ ನಡೆಯಿತು. ನಂತರ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
"
ಭೈರಾಪುರ ಗ್ರಾಮದ ದುರ್ಗಾದೇವಿ, ತಾಯಮ್ಮದೇವಿ ಜಾತ್ರೆ ಅದ್ದೂರಿಯಾಗಿ ನಡೆದಿದೆ. ಸುತ್ತಲಿನ ಗ್ರಾಮಗಳ ಭಕ್ತರು ದೇವಿಗೆ ಭಕ್ತಿಯಿಂದ ಹರಿಕೆ ಸಲ್ಲಿಸುತ್ತಿದ್ದಾರೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಸಂಭ್ರಮ ಹೆಚ್ಚಿಸಿವೆ.
— ಕೊಟ್ರಯ್ಯ ಸಸಿಮಠ ಗ್ರಾಮಸ್ಥ ಬೈರಾಪುರ