ಕುಷ್ಟಗಿ ಪಿಕಾರ್ಡ್ ಬ್ಯಾಂಕ್‌ನಲ್ಲಿ ಮಹರ್ಷಿ ಭಗೀರಥ ಬದಲು ವಾಲ್ಮೀಕಿ ಮಹರ್ಷಿ ಭಾವಚಿತ್ರ ಇರಿಸಿ ಪೂಜೆ ಸಲ್ಲಿಸಿರುವುದು.
- ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿಕೆ
ಕುಷ್ಟಗಿ: ಮಹರ್ಷಿ ಭಗೀರಥರು ನಾಡಿನ ಅಧ್ಯಾತ್ಮ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ವಿಪ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗುರುವಾರ ಮಾತನಾಡಿದರು.
ಭಗೀರಥರು ಶಕ್ತಿಯ ಮೂಲಕ ಗಂಗೆಯಿಂದ ನೀರು ಹರಿಸಿ ಆಧ್ಯಾತ್ಮದ ಮಹಾನ್ ವ್ಯಕ್ತಿಗಳಾಗಿ ನಾಡಿನ ಉದ್ದಗಲಕ್ಕೂ ಹೆಸರಾಗಿದ್ದಾರೆ. ಅನೇಕ ಮಹಾನ್ ಪುರಷರು ನಾಡಿಗಾಗಿ ಶ್ರಮಿಸಿದ್ದಾರೆ. ಅಂತ ನೆಲದಲ್ಲಿ ಜನಸಿದ ನಾವೇ ಪುಣ್ಯವಂತರು ಎಂದರು.
ತಹಸೀಲ್ದಾರ್ ಅಶೋಕ ಶಿಗ್ಗಾವಿ, ಉಪ್ಪಾರ ಭಗೀರಥ ಸಮಾಜದ ತಾಲೂಕು ಅಧ್ಯಕ್ಷ ಸಂಗಪ್ಪ ಭಾವಿಕಟ್ಟಿ, ಬಿಜೆಪಿ ಮುಖಂಡ ಪ್ರಭಾಕರ ಚಿಣಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕೆಬಿ, ಯುವ ಘಟಕದ ಅಧ್ಯಕ್ಷ ಪುಂಡಲೀಕಪ್ಪ ಜೂಲಕಟ್ಟಿ, ಚಂದ್ರು ಹಾವರಗಿ, ನಾಗರಾಜ ಉಪ್ಪಾರ್ ವಕೀಲ, ಶಿವು ಹಿರೇಮನಿ, ಅಮರೇಶ ನಾಗರಾಳ, ಮೈಲಾರಪ್ಪ ಮಂತ್ರಿ ಇತರರಿದ್ದರು.
ರಾಷ್ಟ್ರೀಯ ಹೆದ್ದಾರಿ ಹತ್ತಿರದ ಪಿಕಾರ್ಡ್ ಬ್ಯಾಂಕ್‌ನಲ್ಲಿ ಗುರುವಾರ ಮಹರ್ಷಿ ಭಗೀರಥ ಜಯಂತ್ಯುತ್ಸವ ಆಚರಣೆ ವೇಳೆ ವಾಲ್ಮೀಕಿ ಮಹರ್ಷಿ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಜಯಂತಿ ಆಚರಣೆ ಮಾಡಲಾಯಿತು. ಇದನ್ನು ಖಂಡಿಸಿರುವ ಉಪ್ಪಾರ ಭಗೀರಥ ಸಮಾಜದ ಯುವ ಘಟಕದ ಅಧ್ಯಕ್ಷ ಪುಂಡಲೀಕಪ್ಪ ಜೂಲಕಟ್ಟಿ, ಬ್ಯಾಂಕ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುದ್ದಿಗೋಷ್ಠಿಯಲ್ಲಿ ಗುರುವಾರ ತಾಲೂಕು ಆಡಳಿತವನ್ನು ಒತ್ತಾಯಿಸಿದರು. ಘಟಕದ ತಾಲೂಕು ಅಧ್ಯಕ್ಷ ಸಂಗಪ್ಪ ಭಾವಿಕಟ್ಟಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕೆಬಿ, ಮುಖಂಡರಾದ ಚಂದ್ರು ಹಾವರಗಿ, ನಾಗರಾಜ ಉಪ್ಪಾರ್ ವಕೀಲ, ಶಿವು ಹಿರೇಮನಿ, ಅಮರೇಶ್ ನಾಗರಾಳ, ಮೈಲಾರಪ್ಪ ಇತರರಿದ್ದರು.