ಗಂಗಾವತಿ ಭಗೀರಥ ವೃತ್ತದಲ್ಲಿ ತಾಲೂಕು ಆಡಳಿತ ಮತ್ತು ಉಪ್ಪಾರ ಸಮಾಜದಿಂದ ಮಹರ್ಷಿ ಶ್ರೀ ಭಗೀರಥ ಜಯಂತಿ ಆಚರಿಸಲಾಯಿತು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಎಸ್.ಶಿವರಾಮೇಗೌಡ, ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್, ಉಪ್ಪಾರ ಸಮಾಜದ ಮುಖಂಡರಾದ ನಗರಸಭೆ ಮಾಜಿ ಸದಸ್ಯ ನೀಲಕಂಠಪ್ಪ ಕಟ್ಟಿಮನಿ, ಅಮರಜ್ಯೋತಿ ವೆಂಕಟೇಶ ಇತರರಿದ್ದರು. 
ಕೊಪ್ಪಳ

ಮಾತಿನಂತೆ ನಡೆದುಕೊಳ್ಳುವ ಸಮಾಜ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಪರಣ್ಣ ಮುನವಳ್ಳಿ ಅಭಿಮತ
  • ಜಿಲ್ಲಾದ್ಯಂತ ಮಹರ್ಷಿ ಭಗೀರಥ ಜಯಂತಿ ಆಚರಣೆ
ಗಂಗಾವತಿ: ರಾಜಕೀಯ ಮತ್ತು ಶೈಕ್ಷಣಿಕವಾಗಿ ಉಪ್ಪಾರ ಸಮಾಜ ಸದೃಢವಾಗಬೇಕು ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದ ಭಗೀರಥ ವೃತ್ತದಲ್ಲಿ ತಾಲೂಕು ಆಡಳಿತ ಮತ್ತು ಉಪ್ಪಾರ ಸಮಾಜದಿಂದ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ಶ್ರೀ ಭಗೀರಥ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಮಾತಿನಂತೆ ನಡೆದುಕೊಳ್ಳುವ ಸಮಾಜವಾಗಿದ್ದು, ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದಬೇಕಿದೆ ಎಂದರು.
ಮಾಜಿ ಸಂಸದ ಎಸ್.ಶಿವರಾಮೇಗೌಡ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ಗಿರೇಗೌಡ, ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್, ಟಿಎಪಿಸಿಎಂಎಸ್ ಸದಸ್ಯ ಜೋಗದ ನಾರಾಯಣಪ್ಪನಾಯಕ, ನಗರಸಭೆ ಮಾಜಿ ಸದಸ್ಯರಾದ ನೀಲಕಂಠಪ್ಪ ಕಟ್ಟಿಮನಿ, ವಾಸುದೇವ ನವಲಿ, ಸೋಮನಾಥ ಭಂಡಾರಿ, ಉದ್ಯಮಿ ಸರ್ವೇಶ ಮಾಂತಗೊಂಡ, ಉಪ್ಪಾರ ಸಮಾಜದ ಮುಖಂಡರಾದ ಅಮರಜ್ಯೋತಿ ವೆಂಕಟೇಶ, ಮಹೇಶ ಸಾಗರ್, ಯಂಕಪ್ಪ ಕಟ್ಟಿಮನಿ, ಪಂಪಾಪತಿ ಇಂಗಳಗಿ, ಯಮನೂರಪ್ಪ ಹುಲಿಗಿ, ಯು.ಲಕ್ಷ್ಮಣ ಇತರರಿದ್ದರು.
ಇದಕ್ಕೂ ಮುನ್ನ ನಗರದ ದುರ್ಗಾದೇವಿ ದೇವಾಲಯದಿಂದ ಭಾವಚಿತ್ರವನ್ನು ಕುಂಭ, ಕಲಶದೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಸೀತಾರಾಮಾಂಜನೇಯ ದೇವಾಲಯದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಪ್ರಮುಖರಾದ ಮನೋಹರಗೌಡ ಹೇರೂರು, ಡಾ.ಅಮರೇಶ ಪಾಟೀಲ್ ಇತರರಿದ್ದರು.
ತಹಸಿಲ್ ಕಚೇರಿ: ಇಲ್ಲಿ ಕಂದಾಯ ಇಲಾಖೆ ಮತ್ತು ಉಪ್ಪಾರ ಸಮಾಜದಿಂದ ಮಹರ್ಷಿ ಭಗೀರಥ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಲಾಯಿತು. ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್, ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿ, ನಾಗರತ್ನಮ್ಮ, ಕವಿತಾ, ಅನ್ನಪೂರ್ಣಮ್ಮ, ಉಪ್ಪಾರ ಸಮಾಜದ ಮುಖಂಡರಾದ ಅಮರಜ್ಯೋತಿ ನರಸಪ್ಪ, ಬಜಾರ ನಾರಾಯಣಪ್ಪ, ಹನುಮಂತಪ್ಪ ಆದಾಪುರ, ಯಂಕಪ್ಪ ಕಟ್ಟಿಮನಿ ಇತರರಿದ್ದರು.
ಆರ‌್ಹಾಳ: ತಾಲೂಕಿನ ಆರ‌್ಹಾಳದ ಭಗೀರಥ ಯುವಕ ಸಂಘದ ಆವರಣದಲ್ಲಿ ಮಹರ್ಷಿ ಶ್ರೀ ಭಗೀರಥ ಜಯಂತಿ ಆಚರಿಸಲಾಯಿತು. ನಾಮಲಕಕ್ಕೆ ಗಣ್ಯರು ಪುಷ್ಪಾರ್ಪಣೆ ಸಲ್ಲಿಸಿದರು. ಪ್ರಮುಖರಾದ ರುದ್ರೇಶ ಉಪ್ಪಾರ, ಶಿವಕುಮಾರ ಉಪ್ಪಾರ, ರಮೇಶ ಉಪ್ಪಾರ, ಚನ್ನಪ್ಪ ಉಪ್ಪಾರ, ನಾಗರಾಜ ಉಪ್ಪಾರ ಹೊಸಳ್ಳಿ, ಯಮನೂರ ಉಪ್ಪಾರ, ಮರಿಸ್ವಾಮಿ ಉಪ್ಪಾರ, ದೇವೇಂದ್ರಪ್ಪ ಉಪ್ಪಾರ, ಹನುಮಂತ ಹೊಸ್ಮನಿ ಇತರರಿದ್ದರು.