ಹೊಸಹಳ್ಳಿಯಲ್ಲಿ ಭಾನುವಾರ ಮಾರುತೇಶ್ವರ ಜಾತ್ರೆ ಅಂಗವಾಗಿ ಸಾಮೂಹಿಕ ವಿವಾಹಗಳು ನೆರವೇರಿದವು.
- ರಾಶಿಯಲ್ಲಿ ಹಾರಿ
- ಹಲವು
- ಯುವಕರು
ಮುನಿರಾಬಾದ್: ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಶ್ರೀ ಮಾರುತೇಶ್ವರ ಜಾತ್ರಾ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 12 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, 25 ವರ್ಷಗಳಿಂದ ಸಾಮೂಹಿಕ ವಿವಾಹ ಮಾಡುತ್ತಿರುವ ಹೊಸಹಳ್ಳಿ ಗ್ರಾಮಸ್ಥರ ಕಾರ್ಯ ಶ್ಲಾಘನೀಯ ಎಂದರು.
ಜಾತ್ರೆ ಅಂಗವಾಗಿ ಮಧ್ಯಾಹ್ನ ಮುಳ್ಳಿನ ರಾಶಿಯಲ್ಲಿ ಹಾರಿ ಹಲವು ಯುವಕರು ಹರಕೆ ತೀರಿಸಿದರು. ಪ್ರಮುಖರಾದ ಕುಣಿಕೇರಿಯ ಹುಚ್ಚಮ್ಮ ಚೌಧರಿ, ಗಣ್ಯರಾದ ಸಂಪತ್ ರಾಜ್ ಮಣ್ಣೂರ, ಪಂಚಾಕ್ಷರಯ್ಯ ಹಿರೇಮಠ, ಹನುಮಂತಪ್ಪ ಮೆಟ್ಟಿನ್, ಗಟ್ಟೆಪ್ಪ ಈಳಿಗೇರ, ಮಾರುತಿ ಬಗನಾಳ, ಮಂಜುನಾಥ ಕಲಾಲ್, ಸದ್ದಾಮ್ ಹುಸೇನ್ ಕಳ್ಳಿಮನಿ, ಅಬ್ದುಲ್ ವಾಹಿದ್, ಅರ್ಚಕ ಚಂದ್ರಶೇಖರಯ್ಯ ಹಿರೇಮಠ, ಮೈನಳ್ಳಿ ಮಠದ ಸಿದ್ದೇಶ್ವರ ಸ್ವಾಮೀಜಿ ಇತರರಿದ್ದರು.