ಅಳವಂಡಿಯಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಪಿಡಿಒ ಕೊಟ್ರಪ್ಪ ಅಂಗಡಿ, ರಾಜೀವ್‌ಗಾಂಧಿ ಪಂಚಾಯತ್ ರಾಜ್ ಪೆಲೋ ಸೌಜನ್ಯಾ, ಅಂಗನವಾಡಿ ಮೇಲ್ವಿಚಾರಕಿ ರೆಹಮತ್ ಬೀ, ಸಿಆರ್‌ಪಿ ವಿಜಯಕುಮಾರ ಟಿಕಾರೆ, ಪ್ರಮುಖರಾದ ರೇಣುಕಪ್ಪ ಹಳ್ಳಿಕೇರಿ, ವಿಶ್ವನಾಥ ದೋತರಗಾವಿ, ಮಲ್ಲಪ್ಪ ಬೆಣಕಲ್ ಇತರರಿದ್ದರು. 
ಕೊಪ್ಪಳ

ಅನಿಷ್ಟ ಪದ್ಧತಿಗಳ ಬಗ್ಗೆ ಜಾಗೃತರಾಗಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಅನಿಷ್ಟ ಪದ್ಧತಿ
  • ಜಾಗೃತರಾಗಿ
  • ಮಕ್ಕಳ ಹಕ್ಕು

ಅನಿಷ್ಟ ಪದ್ಧತಿಗಳ ಬಗ್ಗೆ ಜಾಗೃತರಾಗಿ

ಅಳವಂಡಿ: ಸಂವಿಧಾನ ಮಕ್ಕಳಿಗೆ ಜೀವಿಸುವ ಹಕ್ಕು, ರಕ್ಷಣೆ ಹಕ್ಕು, ಭಾಗವಹಿಸುವ ಹಕ್ಕು, ವಿಕಸದ ಹಕ್ಕು ನೀಡಿದೆ ಎಂದು ರಾಜೀವ್‌ಗಾಂಧಿ ಪಂಚಾಯತ್ ರಾಜ್ ಪೆಲೋ ಸೌಜನ್ಯಾ ಹೇಳಿದರು.
ಗ್ರಾಮದ ಕಸ್ತೂರಬಾ ಗಾಂಧಿ ವಸತಿ ಶಾಲೆ ಆವರಣದಲ್ಲಿ ಜಿಪಂ, ತಾಪಂ, ಗ್ರಾಪಂ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಮಾತನಾಡಿದರು.
ತಾಯಿಯ ಗರ್ಭದಿಂದ ಮರಣದವರೆಗೂ ಕಾಯ್ದೆ ಜಾರಿಗೊಳಿಸಲಾಗಿದೆ. ಮಕ್ಕಳು 14ವರ್ಷದವರೆಗೂ ಕೂಲಿ ಕೆಲಸ ಮಾಡುವಂತಿಲ್ಲ. ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಮಕ್ಕಳ ಶೋಷಣೆ, ಲಿಂಗ ತಾರತಮ್ಯ ದಂಥ ಅನಿಷ್ಟ ಪದ್ಧತಿಗಳ ಬಗ್ಗೆ ಜಾಗೃತರಾಗಬೇಕು. ಇಂಥ ಘಟನೆಗಳು ಕಂಡು ಬಂದರೆ ಮಕ್ಕಳ ಸಹಾಯವಾಣಿ 1098 ಹಾಗೂ ತುರ್ತು ಕರೆ 112ಗೆ ಮಾಹಿತಿ ನೀಡಬೇಕು ಎಂದರು.
ಗ್ರಾಪಂ ಸದಸ್ಯ ಗುರು ಬಸವರಾಜ ಹಳ್ಳಿಕೇರಿ ಮಾತನಾಡಿ, ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಲು ಮಕ್ಕಳ ಗ್ರಾಮಸಭೆ ವೇದಿಕೆಯಾಗಿದೆ. ಪಾಲಕರು ಮತ್ತು ಸಮಾಜದ ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣದ ಬಗ್ಗೆ ಜವಾಬ್ದಾರಿ ವಹಿಸಬೇಕು. ಎಲ್ಲರೂ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಿ ಎಂದು ತಿಳಿಸಿದರು.
ಮಕ್ಕಳ ಆಟಿಕೆ ಸಾಮಗ್ರಿ, ಚರಂಡಿ ವ್ಯವಸ್ಥೆ, ಗೇಟ್ ಅಳವಡಿಕೆ, ಬೀದಿ ನಾಯಿಗಳ ಹಾವಳಿ ತಡೆ, ಸಿಸಿ ಕ್ಯಾಮರಾ ಅಳವಡಿಕೆ, ಮೈದಾನ ಸಮತಟ್ಟು ಹಾಗೂ ಸ್ವಚ್ಛತೆ, ಶುದ್ಧ ಕುಡಿವ ನೀರು ಪೂರೈಕೆ, ಬಸ್ ಸಮಸ್ಯೆ, ಶಾಲಾ ಆವರಣದಲ್ಲಿ ಮಧ್ಯ ಸೇವಿಸಿ ತ್ಯಾಜ್ಯ ಬಿಸಾಡುತ್ತಿರುವುದು. ಹಾಸ್ಟೆಲ್‌ಗೆ ಬಿಸಿನೀರು, ಬಿಸಿಯೂಟದ ಕೊಠಡಿ ನಿರ್ಮಾಣ, ಶೌಚಗೃಹ ದುರಸ್ತಿ ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ತಿಳಿಸಿದರು.
ಪಿಡಿಒ ಕೊಟ್ರಪ್ಪ ಅಂಗಡಿ, ಅಂಗನವಾಡಿ ಮೇಲ್ವಿಚಾರಕಿ ರೆಹಮತ್ ಬೀ, ಸಿಆರ್‌ಪಿ ವಿಜಯಕುಮಾರ ಟಿಕಾರೆ, ಪ್ರಮುಖರಾದ ರೇಣುಕಪ್ಪ ಹಳ್ಳಿಕೇರಿ, ವಿಶ್ವನಾಥ ದೋತರಗಾವಿ, ಮಲ್ಲಪ್ಪ ಬೆಣಕಲ್, ಗುರು ಬಸವರಾಜ ಹಳ್ಳಿಕೇರಿ, ಮಲ್ಲಪ್ಪ ಬೆಣಕಲ್, ತೋಟಯ್ಯ ಅರಳೆಮಠ, ವಸಂತ ನಾಗರಳ್ಳಿ ಇತರರಿದ್ದರು.