ಕೊಪ್ಪಳದಲ್ಲಿ ಬಸಾಪೂರ ಕೆರೆಯನ್ನು ಮುಕ್ತಗೊಳಿಸುವಂತೆ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಎಡಿಸಿ ಸಿದ್ರಾಮೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು. ಅಧ್ಯಕ್ಷ ಎಸ್​.ಎ.ಗಫಾರ್​, ಮುಖ್ಯ ಸಂಚಾಲಕ ಬಸವರಾಜ್​ ಶೀಲವಂತರ್​, ಮಂಗಳೇಶ ರಾಥೋಡ್​, ಯಮನೂರಪ್ಪ ಹಾಲಳ್ಳಿ ಇದ್ದರು. 
ಕೊಪ್ಪಳ

ಬಸಾಪುರ ಕೆರೆ ಜನ ಜಾನುವಾರುಗಳಿಗೆ ಮುಕ್ತಗೊಳಿಸಿ

ಪ್ರಮುಖ ಮುಖ್ಯಾಂಶಗಳು

  • ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮನವಿ
ಕೊಪ್ಪಳ: ತಾಲೂಕಿನ ಬಸಾಪುರ ಕೆರೆಯನ್ನು ಜನ ಜಾನುವಾರುಗಳಿಗೆ ಮುಕ್ತವಾಗೊಳಿಸುವಂತೆ ಒತ್ತಾಯಿಸಿ. ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ತಾಲೂಕಿನ ಗಿಣಿಗೇರಿ ಹಾಗೂ ಹಿರೇ ಬಗನಾಳ ಗ್ರಾಮದ ಸುತ್ತಲೂ ತಲೆ ಎತ್ತಿ ನಿಂತಿರುವ ಬೃಹತ್​ ಕಾರ್ಖಾನೆಗಳು ಹೊರ ಸೂಸುವ ರಾಸಾಯನಿಕ ಮಿಶ್ರಿತ ಹೊಗೆ ಹಾಗೂ ಧೂಳಿನಿಂದಾಗಿ ಜಿಲ್ಲೆ ಜನ ಸಾಕಫಿ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಕಾರ್ಖಾನೆಗಳಿಂದ ಉಂಟಾದ ಪರಿಸರ ಮಾಲಿನ್ಯದಿಂದಾಗಿ ಸಾಕಫಿ್ಟು ಜನ ಜಾನುವಾರುಗಳು ಮೃತಪಟ್ಟ ಉದಾಹರಣೆಗಳಿವೆ. ಇದರ ವಿರುದ್ಧ ಸುಮಾರು ವರ್ಫಿಗಳಿಂದ ವಿವಿಧ ರೀತಿಯ ಹೋರಾಟಗಳು ನಡೆಯುತ್ತಿವೆ. ಮಾಲಿನ್ಯದ ಜೊತೆಗೆ ಎಂ.ಎಸ್​.ಪಿ.ಎಲ್​ ಕಬಳಿಕೆ ಮಾಡಿರುವ ಬಸಾಪುರ ಕೆರೆಯನ್ನು ಜನ ಜಾನುವಾರುಗಳಿಗಾಗಿ ಮುಕ್ತಗೊಳಿಸಬೇಕೆಂಬುದು ಮುಖ್ಯ ಬೇಡಿಕೆಯಾಗಿದೆ.
ಡಿಸಿಯವರು ಕೆರೆಯನ್ನು ಮುಕ್ತಗೊಳಿಸುವಂತೆ ಆದೇಶಿಸಬೇಕು. ವರ್ಫಿವು ಬಿಸಿಲಿನ ತಾಪಮಾನವು ವಿಪರಿತ ಇರುವುದರಿಂದ ಕುರಿ, ದನ-ಕರುಗಳಿಗೆ ಕುಡಿಯಲು ನೀರಿಲ್ಲದೇ ತೊಂದರೆ ಅನುಭವಿಸುತ್ತಿವೆ. ಬಸಾಪುರ ಕೆರೆಯನ್ನು ಮುಕ್ತಗೊಳಿಸುವಲಿ ಕಾನೂನಿನ ತೊಡಕುಗಳಿದ್ದಲ್ಲಿ ತಾವು ಮಾನವೀಯ ನೆಲಗಟ್ಟಿನ ಮೇಲೆ ಯೋಚಿಸಿ ಬಸಾಪುರ ಕೆರೆ ಮುಕ್ತಗೊಳಿಸುವ ಮೂಲಕ ಜನ ಜಾನುವಾರಗಳಿಗೆ ನೀರು ಕುಡಿಯಲು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್​.ಎ.ಗಫಾರ್​, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖ್ಯ ಸಂಚಾಲಕ ಬಸವರಾಜ್​ ಶೀಲವಂತರ್​, ಗಿಣಿಗೇರಾ ನಾಗರಿಕ ಹೋರಾಟ ಸಮಿತಿ ಸಂಚಾಲಕ ಮಂಗಳೇಶ ರಾಥೋಡ್​, ಕುರಿಗಾರರ ಸಂಘದ ಅಧ್ಯಕ್ಷ ಯಮನೂರಪ್ಪ ಹಾಲಳ್ಳಿ, ಬೀರಪ್ಪ ಶಹಾಪುರ, ಕಂಪ್ಲೆಪ್ಪ ಶಹಾಪುರ, ಚನ್ನಬಸಪ್ಪ ಅಪ್ಪಣವರ್​, ಮುತ್ತುರಾಜ್​ ಚನ್ನದಾಸರ ಇತರರಿದ್ದರು.