ಕೊಪ್ಪಳ: ತಾಲೂಕಿನ ಬಸಾಪುರ ಕೆರೆಯನ್ನು ಬಿಎಸ್ಪಿಎಲ್ ಕಂಪನಿಗೆ ಬಿಟ್ಟುಕೊಡುವುದಿಲ್ಲ. ಈ ಬಗ್ಗೆ ಮೇ 5ರಂದು ನಿರ್ಣಾಯಕ ಹೋರಾಟ ಹಮ್ಮಿಕೊಳ್ಳುವುದಾಗಿ ರೈತ ಸಂದ ಜಿಲ್ಲಾಧ್ಯಕ್ಷ ಭೀಮಸೇನ ಕಲಿಕೇರಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇದು ನಮ್ಮ ನಿರ್ಣಾಯಕ ಹೋರಾಟ. ಯಾವುದೇ ಕಾರಣಕ್ಕೂ ಕಾರ್ಖಾನೆಗೆ ಕೆರೆ ಬಿಟ್ಟುಕೊಡುವುದಿಲ್ಲ. ಜಾನುವಾರುಗಳಿಗಾಗಿ ಕೆರೆ ಬೇಕೇ ಬೇಕು. ಕಂಪನಿ ಬಿಟ್ಟುಕೊಟ್ಟರೆ ಒಳ್ಳೆಯದು. ಆದರೆ, ಸರ್ಕಾರ ತಮಗೆ ನೀಡಿದೆ ಎಂದು ಹೇಳಿ ಕಾಂಪೌಂಡ್ ಹಾಕಿಕೊಂಡಿದ್ದಾರೆ. 2003ರಿಂದ ಹೋರಾಟ ಮಾಡಿದರೂ ಲ ನೀಡಿವೆಲ್ಲದಂದರು.
ಮೇ 5ರಂದು ಕಾರ್ಖಾನೆ ಗೇಟ್ ಮುರಿದು ಜಾನುವಾರುಗಳೊಂದಿಗೆ ಒಳ ನುಗ್ಗುತ್ತೇವೆ. ಕೆರೆ ಮುಕ್ತಗೊಳಿಸುತ್ತೇವೆ. ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಸೇರಿ ಅನೇಕ ನಾಯಕರು ಬರಲಿದ್ದಾರೆಂದು ತಿಳಿಸಿದರು. ದಲಿತ ಸಂಘರ್ಷ ಸಮಿತಿ ಮುಖಂಡ ಮೂಕಪ್ಪ ಮೇಸ್ತ್ರಿ ಇದ್ದರು.