ತಾವರಗೇರಾದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಮಂಡಲಪೂಜೆ ಪ್ರಯುಕ್ತ ಅಯ್ಯಪ್ಪ ಸ್ವಾಮಿ ಭಾವಚಿತ್ರ ಮೆರವಣಿಗೆ ಮಾಡಿದರು.  
ಕೊಪ್ಪಳ

ಅಯ್ಯಪ್ಪಸ್ವಾಮಿ ಮಂಡಲಪೂಜೆ ಶಾಸ್ತ್ರೋಕ್ತ

ಪ್ರಮುಖ ಮುಖ್ಯಾಂಶಗಳು

  • ತಾವರಗೇರಾ ಶಬರಿಮಲೆ ಯಾತ್ರೆ
  • ಅಯ್ಯಪ್ಪಸ್ವಾಮಿ ಭಾವಚಿತ್ರ, ಪಲ್ಲಕ್ಕಿ ಮೆರವಣಿಗೆ
ತಾವರಗೇರಾ: ಇಲ್ಲಿನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಶಬರಿಮಲೆ ಯಾತ್ರೆ ನಿಮಿತ್ತ ಶುಕ್ರವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಲಂಕೃತ ವಾಹನದಲ್ಲಿ ಅಯ್ಯಪ್ಪಸ್ವಾಮಿ ಭಾವಚಿತ್ರ ಹಾಗೂ ಪಲ್ಲಕ್ಕಿ ಮೆರವಣಿಗೆ ಮಾಡಿದರು.
ಪಟ್ಟಣದ 180 ಜನ ಶಬರಿಮಲೆಯಲ್ಲಿ ಮಕರ ಸಂಕ್ರಮಣಕ್ಕೆ ನಡೆಯಲಿರುವ ಜ್ಯೋತಿ ದರ್ಶನಕ್ಕೆ ತೆರಳಿದ್ದು, ಮಂಡಲಪೂಜೆ ಮಾಡಿ ಸಾವಿರಾರು ಜನರಿಗೆ ಅ್ನನಸಂತರ್ಪಣೆ ಮಾಡಿದರು.
ಕಳೆದ ಮೂವತ್ತು ವರ್ಷಗಳಿಂದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾ ಬಂದಿದ್ದು, ಡಿ.12 ರಂದು ಪಟ್ಟಣದ ಐದು ಜನ ಮಾಲಾಧಾರಿಗಳು ಇರುಮುಡಿ ಹೊತ್ತು ಪಾದಯಾತ್ರೆ ಮೂಲಕ ಶಬರಿಮಲೆಗೆ ತೆರಳಿದ್ದಾರೆ.
ಗುರುಸ್ವಾಮಿಗಳಾದ ನಾರಾಯಣಸ್ವಾಮಿ, ವೆಂಕನಗೌಡ ಸ್ವಾಮಿ, ರಾಘವೇಂದ್ರಸ್ವಾಮಿ, ಮೌನೇಶಸ್ವಾಮಿ, ಮಂಜುನಾಥಸ್ವಾಮಿ, ಪ್ರಶಾಂತಸ್ವಾಮಿ ಸೇರಿದಂತೆ ಇತರರು ಮೆರವಣಿಗೆಯಲ್ಲಿದ್ದರು.