ಅಗಳಕೇರಾದಲ್ಲಿ ಆಯೋಜಿಸಿದ್ದ ಆಯುರ್ವೇದ ಗ್ರಾಮ 3.0 ಕಾರ್ಯಕ್ರಮದಲ್ಲಿ ಚರಕ ಸಂಹಿತೆ ಗ್ರಂಥ ಹಾಗೂ ಚರಕ ಮಹರ್ಷಿಗಳ ವೇಷಧಾರಿಗಳ ಭವ್ಯ ಮೆರವಣಿಗೆ ನಡೆಸಲಾಯಿತು. ಪ್ರಾಚಾರ್ಯ ಡಾ.ಮಹಾಂತೇಶ ಸಾಲಿಮಠ, ಗ್ರಾಮದ ಹುಲುಗಪ್ಪ ಗಡಾದ್, ಕೆಂಚಪ್ಪ ಇಟ್ನಾಳ್, ಕನಕರಾಜ ಬಳ್ಳಾಪುರ, ಮಂಜುನಾಥ್ ಶೆಟ್ಟರ್, ಪರಶುರಾಮ ವಡ್ಡರ, ಸಂತೋಷ ಕೊರಗಲ್ ಇತರರಿದ್ದರು.
ಮುನಿರಾಬಾದ್: ಅಗಳಕೇರಾದಲ್ಲಿ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಿಂದ ಆಯುರ್ವೇದ ಗ್ರಾಮ 3.0 ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಂಗವಾಗಿ ಚರಕ ಸಂಹಿತೆ ಗ್ರಂಥ ಹಾಗೂ ಚರಕ ಮಹರ್ಷಿಗಳ ವೇಷಧಾರಿಗಳೊಂದಿಗೆ ಗ್ರಾಮದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ವಿವಿಧ ವಾದ್ಯಮೇಳ, ವಿದ್ಯಾರ್ಥಿಗಳ ಉತ್ಸಾಹ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು.
ಗ್ರಾಮಸ್ಥರ ಆರೋಗ್ಯ, ಶ್ರೇಯಸ್ಸು ಹಾಗೂ ಊರಿನ ಒಳಿತಿಗೆ ಅಗ್ನಿಹೋತ್ರ ಹವನವನ್ನು ಆಯೋಜಿಸಲಾಗಿತ್ತು. ಅಗ್ನಿಹೋತ್ರದ ಮಹತ್ವ ಹಾಗೂ ಅದನ್ನು ಪ್ರತಿದಿನ ಮನೆಯಲ್ಲಿ ಸರಳವಾಗಿ ನಿರ್ವಹಿಸುವ ವಿಧಾನಗಳ ಕುರಿತು ಗ್ರಾಮದ ಮಹಿಳೆಯರಿಗೆ ಮತ್ತು ಸಾರ್ವಜನಿಕರಿಗೆ ತಿಳಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಡಾ.ಮಹಾಂತೇಶ್ ಸಾಲಿಮಠ, ಡಾ. ಗವಿ ಪಾಟೀಲ್, ಡಾ. ಶಾಂತವೀರ ಶಿರೂರಮಠ, ಡಾ. ಬಿಂದು ಮಾಧವ್, ಆಸ್ಪತ್ರೆಯ ಸಿಬ್ಬಂದಿ ಸಿದ್ದಲಿಂಗಯ್ಯ ಸ್ವಾಮಿ ಹಾಗೂ ಗ್ರಾಮದ ಪ್ರಮುಖರಾದ ಹುಲುಗಪ್ಪ ಗಡಾದ್, ಕೆಂಚಪ್ಪ ಇಟ್ನಾಳ್, ಕನಕರಾಜ್ ಬಳ್ಳಾಪುರ, ಮಂಜುನಾಥ್ ಶೆಟ್ಟರ್, ಪರಶುರಾಮ ವಡ್ಡರ, ಸಂತೋಷ್ ಕೊರಗಲ್, ಹರೀಶ್, ಮಹೇಶ್ ಅರಕೇರಿ, ಪಿಡಿಒ ಬಸವರಾಜ ಬಳೆಗಾರ್ ಇತರರಿದ್ದರು.