ಕವಲೂರು ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ಸಮಾಜದ ಮುಖಂಡ ವೆಂಕಟೇಶ ಬಾರಕೇರ ಗಿಣಿಗೇರ, ಪ್ರಮುಖರಾದ ಭರಮಪ್ಪ, ಗುರು ಬಸವರಾಜ, ತೋಟಪ್ಪ, ಹೊನ್ನಪ್ಪ ಗೌಡ ಇತರರು ಇತರರಿದ್ದರು. 
ಕೊಪ್ಪಳ

ವಚನಗಳಿಂದ ಸಮಸಮಾಜ ನಿರ್ಮಾಣಕ್ಕೆ ಜಾಗೃತಿ

ಪ್ರಮುಖ ಮುಖ್ಯಾಂಶಗಳು

  • ಸಮಸಮಾಜ
  • ಜಾಗೃತಿ

ವಚನಗಳಿಂದ ಸಮಸಮಾಜ ನಿರ್ಮಾಣಕ್ಕೆ ಜಾಗೃತಿ

ಕವಲೂರು: ಶರಣರ, ಮಹಾತ್ಮರ ಚಿಂತನೆ, ಆದರ್ಶಗಳನ್ನು ನೆನೆಯುವುದು ಪವಿತ್ರವಾದ ಕಾರ್ಯ ಎಂದು ಸಮಾಜದ ಮುಖಂಡ ವೆಂಕಟೇಶ ಬಾರಕೇರ ಗಿಣಿಗೇರ ಹೇಳಿದರು.
ಗ್ರಾಮದಲ್ಲಿ ಗಂಗಾಮತಸ್ಥರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗ್ರಾಮಸ್ಥರಿಂದ ಬುಧವಾರ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬಿಗರ ಚೌಡಯ್ಯ ಅವರು ಸಮಾಜದ ಅಂಕು ಡೊಂಕುಗಳ ಬಗ್ಗೆ ತಿಳಿಸಿ ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ. ವಚನಗಳ ಮೂಲಕ ಸಮಸಮಾಜ ನಿರ್ಮಾಣಕ್ಕೆ ಜಾಗೃತಿ ಮೂಡಿಸಿದ್ದಾರೆ ಎಂದರು.
ವಕೀಲ ಗುರುಬಸವರಾಜ ಹಳ್ಳಿಕೇರಿ ಮಾತನಾಡಿ, ಶರಣರ ಚಿಂತನೆ ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಚೌಡಯ್ಯ ಅವರು ವಚನಗಳ ಮೂಲಕ ಸಾಮಾಜಿಕ ವ್ಯವಸ್ಥೆಯನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಪ್ರಮುಖರಾದ ಭರಮಪ್ಪ ನಗರ, ತೋಟಪ್ಪ, ಮಹಾಂತೇಶ, ಹೊನ್ನಪ್ಪಗೌಡ, ಹೊನಕೆರಪ್ಪ, ಪ್ರಕಾಶ, ಮುತ್ತಣ್ಣ, ಗುಡದಪ್ಪ, ಶರಣಪ್ಪ, ಈರಪ್ಪ, ಯಂಕಪ್ಪ, ಪ್ರದೀಪ, ಹನುಮಂತ, ಲಕ್ಷ್ಮಪ್ಪ, ಗಂಗಪ್ಪ, ನಿಂಗಪ್ಪ, ದೇವಪ್ಪ, ತಿಪ್ಪಣ್ಣ, ಬಾಳಪ್ಪ, ಪಾಂಡರಂಗಪ್ಪ, ರೇಣುಕಾ ರಾಜ್, ವಿನಾಯಕ ಮಾರುತಿ, ಭೀಮಪ್ಪ, ಶಿವಾನಂದಪ್ಪ, ಜಯರಾಮ, ಮಾರುತಿ, ರವಿಕುಮಾರ ಇತರರಿದ್ದರು.