ಗಂಗಾವತಿ ಬೇತೆಲ್ ಸ್ವತಂತ್ರ ಪಿಯು ಕಾಲೇಜಿನಲ್ಲಿ ಪೊಲೀಸ್ ಇಲಾಖೆ ಮತ್ತು ಎನ್ನೆಸ್ಸೆಸ್ ಘಟಕದಿಂದ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಪಿಎಸೈ ಜಿ.ಟಿ.ನಾಗರಾಜ ಮಂಗಳವಾರ ಉದ್ಘಾಟಿಸಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾಜು ಸುಧಾಕರ, ಆಡಳಿತಾಧಿಕಾರಿ ಹೇಮಾ ಸುಧಾಕರ, ಎಎಸೈ ವೀರೇಶ ಇತರರಿದ್ದರು.
- ಪಿಎಸೈ ಜಿ.ಟಿ. ನಾಗರಾಜ್ ಸಲಹೆ
ಗಂಗಾವತಿ: ಯುವ ಜನತೆ ಭವಿಷ್ಯ ಹಾಳು ಮಾಡುವ ಮಾದಕ ವಸ್ತುಗಳು ಮತ್ತು ಹವ್ಯಾಸಗಳಿಂದ ದೂರವಿರಬೇಕಿದ್ದು, ಜೀವನದಲ್ಲಿ ಸಕಾರಾತ್ಮಕ ಗುರಿಗಳನ್ನು ಹೊಂದುವಂತೆ ನಗರ ಠಾಣೆ ಪಿಎಸೈ ಜಿ.ಟಿ. ನಾಗರಾಜ್ ಸಲಹೆ ನೀಡಿದರು.
ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಸಾಗಣೆ ವಿರೋಧ ದಿನ ನಿಮಿತ್ತ ನಗರದ ಬೇತೆಲ್ ಸ್ವತಂತ್ರ ಪಿಯು ಕಾಲೇಜಿನಲ್ಲಿ ಪೊಲೀಸ್ ಇಲಾಖೆ ಮತ್ತು ಎನ್ನೆಸ್ಸೆಸ್ ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕೆಟ್ಟ ಹವ್ಯಾಸಗಳು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಿಪಿಸುತ್ತಿದ್ದು, ವಿದ್ಯಾರ್ಥಿಗಳು ಉತ್ತಮ ಸ್ನೇಹ ಬಳಗ ಹೊಂದಬೇಕಿದೆ ಎಂದರು.
ಪದವಿ ಕಾಲೇಜು ಪ್ರಾಚಾರ್ಯ ಕೆ.ಬಸವರಾಜ ಮಾತನಾಡಿ, ಯುವಕರು ಕ್ರೀಡೆ, ಯೋಗ ಹಾಗೂ ಉತ್ತಮ ಹವ್ಯಾಸ ಅಳವಡಿಸಿಕೊಂಡು ಆರೋಗ್ಯಕರ ಜೀವನ ನಡೆಸಬೇಕು. ಚಿತ್ರರಂಗದ ನಟರು ಪ್ರಚಾರ ಮಾಡುವ ಮಾದಕ ವಸ್ತುಗಳ ಜಾಹಿರಾತುಗಳಿಂದ ದೂರವಿರಲು ಸಲಹೆ ನೀಡಿದರು.
ಎಎಸೈ ವೀರೇಶ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾಜು ಸುಧಾಕರ, ಆಡಳಿತಾಧಿಕಾರಿ ಹೇಮಾ ಸುಧಾಕರ, ಖಜಾಂಚಿ ಸುಜಾತಾ ರಾಜು ಹಾಗೂ ಉಪನ್ಯಾಸಕರಿದ್ದರು.