ಕುಷ್ಟಗಿಯಲ್ಲಿ ಸಾಮಾಜಿಕ ಹೋರಾಟಗಾರರು ತಹಸೀಲ್ದಾರ್ ಅಶೋಕ್ ಶಿಗ್ಗಾವಿಗೆ ಬುಧವಾರ ಮನವಿ ಸಲ್ಲಿಸಿದರು. ಹೋರಾಟಗಾರ ಮುತ್ತುರಾಜ್ ಡಿ. ಕಟ್ಟಿಮನಿ, ಪ್ರಮುಖರಾದ ಶರಣು ಹಿರೇಮನಿ, ಸತೀಶ್ ಹಿರೇಮನಿ ಇದ್ದರು.
- ಸಾಮಾಜಿಕ ಹೋರಾಟಗಾರರ ಒತ್ತಾಯ
- ತಹಸೀಲ್ದಾರ್ ಅಶೋಕ್ ಶಿಗ್ಗಾವಿಗೆ ಮನವಿ
ಕುಷ್ಟಗಿ: ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆಯಲ್ಲಿ ಸಮರ್ಪಕವಾಗಿ ಅನುದಾನ ಬಳಕೆಯಾಗಿಲ್ಲ. ಆದ್ದರಿಂದ ಕೂಡಲೇ ತನಿಖೆ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರರು ತಹಸೀಲ್ದಾರ್ ಅಶೋಕ್ ಶಿಗ್ಗಾವಿಗೆ ಬುಧವಾರ ಮನವಿ ಸಲ್ಲಿಸಿದರು.
ಸಾಮಾಜಿಕ ಹೋರಾಟಗಾರ ಮುತ್ತುರಾಜ್ ಡಿ.ಕಟ್ಟಿಮನಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ತೋಟಗಾರಿಕೆ ಇಲಾಖೆಗೆ ರೈತರ ಕಲ್ಯಾಣಕ್ಕಾಗಿ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಬಳಕೆಯಾಗಿಲ್ಲ. ತೋಟಗಾರಿಕೆ ಸಬ್ಸಿಡಿ, ತೊಟಗಾರಿಕೆ ಬೆಳೆ ಪರಿಹಾರ, ನೀರಾವರಿ ನೆರವು, ಬಿತ್ತನೆ ಬೀಜ, ರಸಗೊಬ್ಬರ ಸಹಾಯಧನ, ಬರ ಪರಿಹಾರ, ಬೆಳೆ ವಿಮಾ ಪ್ರಯೋಜನಗಳು, ಕೃಷಿ ಯಾಂತ್ರೀಕರಣ ನೆರವು, ರೈತ ಕಲ್ಯಾಣ ಯೋಜನೆಗಳನ್ನು ಸಕಾಲದಲ್ಲಿ ಫಲಾನುಭವಿಗಳಿಗೆ ನೀಡಿಲ್ಲ. ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಕೂಡಲೇ ತನಿಖೆ ಕೈಗೊಂಡು ಇದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಪ್ರತಿಕ್ರಿಯಿಸಿ, ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು. ಪ್ರಮುಖರಾದ ಶರಣು ಹಿರೇಮನಿ, ಸತೀಶ್ ಹಿರೇಮನಿ ಇತರರಿದ್ದರು.