ಗಂಗಾವತಿಯ ತಾಪಂ ಮಂಥನ ಸಭಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಯು.ವಸಂತಕುಮಾರಿ ಮಾತನಾಡಿದರು. ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ನಗರ ಪಿಐ ಪ್ರಕಾಶ ಆರ್. ಯಾತನೂರ್ ಇತರರಿದ್ದರು. 
ಕೊಪ್ಪಳ

ಧ್ವಜಾರೋಹಣಕ್ಕೆ ಹಾಜರಿ ಕಡ್ಡಾಯ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಯು.ವಸಂತಕುಮಾರಿ ಸೂಚನೆ
  • ಗಂಗಾವತಿ ಸ್ವಾತಂತ್ರ್ಯೋತ್ಸವ ಪೂರ್ವಭಾವಿ ಸಭೆ
ಗಂಗಾವತಿ: ಸ್ವಾತಂತ್ರ್ಯೋತ್ಸವ ದಿನವನ್ನು ಮನೆಯ ಹಬ್ಬದಂತೆ ಸಂಭ್ರಮದಿಂದ ಆಚರಿಸಬೇಕಿದ್ದು, ಎಲ್ಲ ಇಲಾಖೆ ಅಧಿಕಾರಿಗಳು ಧ್ವಜಾರೋಹಣಕ್ಕೆ ಕಡ್ಡಾಯವಾಗಿ ಹಾಜರಾಗಬೇಕೆಂದು ತಹಸೀಲ್ದಾರ್ ಯು.ವಸಂತಕುಮಾರಿ ಸೂಚಿಸಿದರು.
ತಾಪಂ ಮಂಥನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಲಿದ್ದು, ಪೊಲೀಸ್, ಗೃಹರಕ್ಷಕ, ಭಾರತ ಸೇವಾ ದಳ, ಎನ್‌ಸಿಸಿ, ಭಾರತ್ ಮತ್ತು ಸ್ಕೌಟ್ಸ್‌ನಿಂದ ಪರೇಡ್, ಸ್ತಬ್ದಚಿತ್ರಗಳ ಪ್ರದರ್ಶನ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಅಯೋಜಿಸಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡ 17 ತಂಡ ರಚಿಸಿದ್ದು, ವಹಿಸಿದ ಜವಾಬ್ದಾರಿ ಕಟ್ಟುನಿಟ್ಟಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಮಾತನಾಡಿ, ನಗರದ ಎಲ್ಲ ಕಚೇರಿ ಮತ್ತು ವೃತ್ತಗಳನ್ನು ವಿದ್ಯುತ್ ದೀಪ, ತಳಿರು ತೋರಣಗಳಿಂದ ಅಲಂಕರಿಸಲಾಗುವುದು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆಲ್ಲ ಉಪಾಹಾರ ಮತ್ತು ನೀರಿನ ವ್ಯವಸ್ಥೆಯನ್ನು ಜವಾಬ್ದಾರಿ ನೀಡಿರುವ ಇಲಾಖೆ ಸರಿಯಾಗಿ ನಿರ್ವಹಿಸಬೆಕು. ನಿರ್ಲಕ್ಷಿಸಿದರೆ ಶಿಸ್ತು ಕ್ರಮಕ್ಕೆ ಶಿಾರಸು ಮಾಡಲಾಗುವುದು ಎಂದು ಎಚ್ಚರಿಸಿದರು.
ನಗರ ಪಿಐ ಪ್ರಕಾಶ ಆರ್.ಯಾತನೂರ್, ಸಿಒ ರವಿ ನಾಗಮ್ಮನವರ್, ಜೆಸ್ಕಾಂ ಎಇಇ ಮಂಜುನಾಥ, ಜಿಪಂ ಪ್ರಭಾರ ಎಇಇ ಪಲ್ಲವಿ ಗುನ್ನಾಳ್, ಎಸಿಡಿಪಿಒ ಪ್ರಸನ್ನ, ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿ, ಪಿಡಿಒ ರವೀಂದ್ರ ಕುಲ್ಕರ್ಣಿ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಚನ್ನಬಸವ ಜೇಕಿನ್, ವಿರೂಪಾಕ್ಷಗೌಡ ನಾಯಕ, ಆಂಜನೇಯ, ರಮೇಶ ಕೋಟಿ, ದೇವಣ್ಣ ಸಂಗಾಪುರ, ಮಂಜು ಸಾಬಳೆ ಇತರರಿದ್ದರು.